ವಿಶ್ವ ಪ್ರಸಿದ್ಧ 'ಕ್ಯಾಟಲ್ ಫೇರ್' ಗಾಗಿ ಪುಷ್ಕರ್ ಹೆಸರುವಾಸಿಯಾಗಿದೆ. ಪ್ರತಿ ವರುಷ ನವಂಬರ್ ತಿಂಗಳಿನಲ್ಲಿ ಕಾರ್ತಿಕ ಪೂರ್ಣಿಮೆಯಂದು ಈ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಈ ಉತ್ಸವದ ಸಮಯದಲ್ಲಿ ಲಕ್ಷಾಂತರ ಭಕ್ತರು ಪುಷ್ಕರ್ ಸರೋವರದ ಪವಿತ್ರ ಸ್ನಾನ ಮಾಡಲು ಇಲ್ಲಿಗೆ ಆಗಮಿಸುತ್ತಾರೆ. ಈ ಜಾತ್ರೆಯಲ್ಲಿ ಸಾಕುಪ್ರಾಣಿಗಳ ಅದರಲ್ಲೂ ವಿಶೇಷವಾಗಿ ಒಂಟೆಗಳ ವ್ಯಾಪಾರವು ಮುಖ್ಯವಾಗಿರುತ್ತದೆ. ಇಷ್ಟೆ ಅಲ್ಲ..ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಇಲ್ಲಿ ನೋಡಬಹುದಾಗಿದ್ದು ಅವುಗಳಲ್ಲಿ ಬೊಂಬೆಯಾಟ, ಒಂಟೆ ಓಟ ಗಳು ಒಳಗೊಂಡಿವೆ.