ಪುಣೆ ನಗರದಲ್ಲಿಯೇ ಪ್ರಮುಖವಾದ ಪ್ರವಾಸಿ ತಾಣವೆಂದರೆ ಪಾರ್ವತಿ ಬೆಟ್ಟ ದೇವಸ್ಥಾನ. ಇದು ನಮ್ಮನ್ನು ಸುಮಾರು 17ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ಗಣಪತಿ, ಪಾರ್ವತಿ ಇತ್ಯಾದಿ ದೇವರುಗಳನ್ನು ಈ ದೇವಸ್ಥಾನದಲ್ಲಿ ದರ್ಶನ ಮಾಡಬಹುದು. ಇದನ್ನು ಪೇಷ್ವಾ ಆಡಳಿತಗಾರರಿಗೆಂದೇ ನಿರ್ಮಿಸಲಾಯಿತು. ನಂತರದಲ್ಲಿ ಇದನ್ನು ಜನಸಾಮಾನ್ಯರಿಗೂ ಮುಕ್ತವಾಗಿಸಲಾಯಿತು.
ಈ ದೇವಸ್ಥಾನವು ಪ್ರಾಚೀನ ಕಲ್ಲಿನ ಕೆತ್ತನೆಯನ್ನು ಹೊಂದಿದೆ. ಭಕ್ತರು ಇಲ್ಲಿಗೆ ದೇವರ ದರುಶನ ಪಡೆದು ಪುನೀತರಾಗಲು ಗುಂಪು ಗುಂಪಾಗಿ ಆಗಮಿಸುತ್ತಾರೆ.
ಇಲ್ಲಿಗೆ ಸಮೀಪದಲ್ಲಿ ಮ್ಯೂಸಿಯಂ ಇದ್ದು ಇದನ್ನು ಪಾರ್ವತಿ ಮ್ಯೂಸಿಯಂ ಎಂದು ಹೆಸರಿಸಲಾಗಿದೆ. ಪಾರ್ವತಿ ಬೆಟ್ಟವು ಚಾರಣಿಗರಿಗೆ ಉತ್ತಮವಾದ ತಾಣ.


Click it and Unblock the Notifications