'ಪಳವೇರ್ಕಾಡು ಎರಿ' ಎಂದು ತಮಿಳಿನಲ್ಲಿ ಕರೆಯಲಾಗುವ ಈ ಪುಲಿಕಾಟ್ ಸರೋವರ ಭಾರತದ ಎರಡನೆ ಅತಿ ದೊಡ್ಡ ಉಪ್ಪುನೀರಿನ ಸರೋವರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳ ಗಡಿಯಲ್ಲಿರುವ ಈ ಸರೋವರ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಂದಲೂ ಜನರನ್ನು ಆಕರ್ಷಿಸುತ್ತದೆ. ಇದು ಶ್ರೀಹರಿಕೋಟಾದ ಮೂಲಕ ಬಂಗಾಳ ಕೊಲ್ಲಿಯಿಂದ ಪ್ರತ್ಯೇಕವಾಗಿದ್ದು, ಶ್ರೀಹರಿಕೋಟ ಒಂದು ತಡೆ ದ್ವೀಪವಾಗಿ ಕಾರ್ಯ ನಿರ್ವಹಿಸುತ್ತದೆ.
ಈ ಖಾರಿಯು ವನ್ಯಜೀವಿ ಮತ್ತು ಮೃಗಗಳಿಂದ ತುಂಬಿದೆ ಹಾಗೂ ಮೀನುಗಾರಿಕೆಗೆ ಪ್ರಸಿದ್ಧ ತಾಣವೂ ಹೌದು. ಈ ಖಾರಿಗೆ ನೀರು ಅರನಿ ನದಿ, ಕಾಲಂಗಿ ನದಿ ಮತ್ತು ಸ್ವರ್ಣಮುಖಿ ನದಿಯಿಂದ ಹರಿದು ಬರುತ್ತದೆ. ಇಲ್ಲಿರುವ ಜೀವ ವೈವಿಧ್ಯ ಮತ್ತು ಅಪ್ರತಿಮ ಪ್ರಕೃತಿ ಸೌಂದರ್ಯ ಈ ಸ್ಥಳವನ್ನು ಪುಲಿಕಾಟ್ ನೋಡಲು ಬರುವವರಿಗೆ ಒಂದು ನೋಡಲೇ ಬೇಕಾದ ಸ್ಥಳವನ್ನಾಗಿಸಿದೆ.
ಇಲ್ಲಿನ ಕೊಳದಲ್ಲಿ ವಿವಿಧ ರೀತಿಯ ಮೀನುಗಳಿದ್ದರೂ, ಕೆಲವು ವಿಶೇಷ ರೀತಿ ಹಕ್ಕಿಗಳು ಮತ್ತು ಹಲವು ಸರೀಸೃಪಗಳು ಮತ್ತು ಜಲ ಸಸ್ಯಗಳು ಕೂಡ ಇಲ್ಲಿನ ಆಕರ್ಷಣೆಯನ್ನು ಹೆಚ್ಚಿಸಿದೆ. ಇಲ್ಲಿನ ಮತ್ತೊಂದು ಅತೀ ಪ್ರಮುಖ ಜನಾಕರ್ಷಣೆ ಎಂದರೆ ನೀರಹಕ್ಕಿಗಳು. ಅಕ್ಟೋಬರ್ ನಿಂದ ಮಾರ್ಚ್ ತನಕದ ಅವಧಿ ಇಲ್ಲಿಗೆ ಭೇಟಿ ನೀಡಲು ಸರಿಯಾದ ಅವಧಿಯಾಗಿದೆ.


Click it and Unblock the Notifications