Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಲಿಕಾಟ್ » ಆಕರ್ಷಣೆಗಳು » ಪುಲಿಕಾಟ್ ಪಕ್ಷಿಧಾಮ

ಪುಲಿಕಾಟ್ ಪಕ್ಷಿಧಾಮ, ಪುಲಿಕಾಟ್

2

ಪುಲಿಕಾಟ್ ಪಕ್ಷಿಧಾಮ (ಅಂತಾರಾಷ್ಟ್ರೀಯವಾಗಿ ಪುಲಿಕಾಟ್ ಸರೋವರ ವನ್ಯಜೀವಿ ಧಾಮ ಎಂದು ಪ್ರಖ್ಯಾತವಾಗಿದೆ)ಈ ಸಣ್ಣ ಊರಿನ ಒಂದು ದೊಡ್ಡ ಆಕರ್ಷಣೆ. ಈ ನಿರ್ಬಂಧಿತ ಪ್ರದೇಶ ಸುಮಾರು 481 ಕಿ.ಮೀ ವ್ಯಾಪಿಸಿದೆ ಹಾಗೂ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಹಲವಾರು ಜಿಲ್ಲೆಗಳನ್ನು ವ್ಯಾಪಿಸಿದೆ. ಸರೋವರ ಮತ್ತು ಪಕ್ಷಿಧಾಮ ಎರಡೂ ಸೇರಿ ಭಾರತದ ಅತಿ ದೊಡ್ಡ ಉಪ್ಪುನೀರಿನ ಸರೋವರ ಹಾಗೂ ಪರಿಸರ ವ್ಯವಸ್ಥೆ ಎಂಬ ಹೆಗ್ಗಳಿಕೆ ಗಳಿಸಿವೆ. ಮೊದಲ ಸ್ಥಾನ ಒರಿಸ್ಸಾದ ಚಿಲ್ಕಾ ಸರೋವರ ಪಡೆದಿದೆ.

ಇಲ್ಲಿನ ಜೀವ ವೈವಿಧ್ಯ ಜಗತ್ತಿನಾದ್ಯಂತದ ಹಲವು ವನ್ಯಜೀವಿ ಆಸಕ್ತರನ್ನು ಪ್ರತಿ ವರ್ಷ ಇಲ್ಲಿಗೆ ಕರೆದುಕೊಂಡು ಬರುತ್ತದೆ. ಇಲ್ಲಿನ ಪಕ್ಷಿಧಾಮದಲ್ಲಿ ದೊಡ್ಡ ರಾಜಹಂಸಗಳು, ನೀರಹಕ್ಕಿಗಳು, ಸಮುದ್ರ ಹಕ್ಕಿಗಳು, ಬೆಳ್ಳಕ್ಕಿಗಳು ಹಾಗು ಬಕ ಪಕ್ಷಿ ಮತ್ತು ಬಾತುಕೋಳಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಕಾಣಬಹುದಾಗಿದೆ. ಈ ಪ್ರದೇಶವು ತಮಿಳು ನಾಡು ಮತ್ತು ಆಂಧ್ರ ಪ್ರದೇಶದ ಅರಣ್ಯ ಇಲಾಖೆಯ ಅಧೀನದಲ್ಲಿದೆ.

ಇದರ ಜೊತೆಗೆ ಇದು ಆಯಾ ಋತುಮಾನಗಳಲ್ಲಿ ವಲಸೆ ಬರುವ ಹಕ್ಕಿಗಳ ವಸತಿಯಾಗಿಯೂ ಕಾರ್ಯ ನಿರ್ವಹಿಸುತ್ತದೆ. ಇವುಗಳನ್ನು ನೋಡಲು ಇಲ್ಲಿಗೆ ಬರಬೇಕಾದ ಅವಧಿ ಎಂದರೆ ನವೆಂಬರ್ ನಿಂದ ಫೆಬ್ರವರಿಯ ತನಕ ತಿಂಗಳುಗಳು. ಪ್ರವಾಸೊದ್ಯಮ ಇಲಾಖೆ ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿಯ ಅವಧಿಯಲ್ಲಿ ಆಚರಿಸುವ ಫ್ಲೆಮಿಂಗೋ ಉತ್ಸವ ಹಲವು ಜನರನ್ನು ಇಲ್ಲಿಗೆ ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed