ಉತ್ತರಪ್ರದೇಶ ರಾಜ್ಯದ ಇತರ ಜಿಲ್ಲೆಗಳೊಂದಿಗೆ, ಸಾಯಿ ನದಿಯು ಪ್ರತಾಪಘಡ್ ದ ಮೂಲಕವೂ ಹರಿಯುತ್ತದೆ. ಈ ನದಿಯು ಪುರಾಣ ಪ್ರಸಿದ್ಧವಾಗಿದ್ದು ಹಿಂದೂಗಳಿಗೆ ಪವಿತ್ರ ನದಿಯೆಂದು ಪರಿಗಣಿತವಾಗಿದೆ. ಪುರಾಣಗಳಲ್ಲಿ ಹಾಗೂ ಗೋಸ್ವಾಮಿ ತುಳಸಿದಾಸರ ರಾಮಚರಿತ ಮಾನಸದಲ್ಲಿ ಈ ನದಿಯ ಉಲ್ಲೇಖವಿದೆ. ವಾಸ್ತವದಲ್ಲಿ, ಪುರಾಣಗಳು ಈ ನದಿಯನ್ನು ಆದಿಗಂಗ ಎಂದು ಪರಿಗಣಿಸಿವೆ ಅರ್ಥಾತ್ ಪ್ರಥಮ ಗಂಗೆ ಎಂದು.
ಸಾಯಿ ನದಿಯು ಗೋಮತಿ ನದಿಯ ಉಪನದಿಯಾಗಿದ್ದು ಹರ್ದೊಯಿ ಜಿಲ್ಲೆಯಲ್ಲಿ ಉಗಮಿಸುತ್ತದೆ ಹಾಗೂ ಲಕ್ನೋ ಮತ್ತು ಉನ್ನಾವ್ ಜಿಲ್ಲೆಗಳ ಮೂಲಕ ಹರಿಯುತ್ತದೆ. ದಕ್ಷಿಣದಲ್ಲಿ ಘುಯಿಸರ್‌ನಾಥ್ ಧಾಮದ ಮೂಲಕ ನದಿಯು ಪಶ್ಚಿಮ ದಿಕ್ಕಿನಲ್ಲಿ ಪ್ರತಾಪಘಡ್ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಈ ನದಿಯು ದೇವಿ ಚಂಡಿಯಿಂದ ನಾಮಾಂಕಿತವಾದ ಚಂಡಿಕಾ ಧಾಮವೆಂಬ ಪುಣ್ಯಕ್ಷೇತ್ರವನ್ನೂ ತಲುಪುತ್ತದೆ. ಈ ನದಿಯಲ್ಲಿ ತೀರ್ಥ ಸ್ನಾನವನ್ನು ಮಾಡಿದ ನಂತರ ಭಕ್ತಾದಿಗಳು ಆರಾಧಿಸಲು ಧಾಮ ಮತ್ತು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ.


Click it and Unblock the Notifications