ತಿರುಮೂರ್ತಿ ಆಣೆಕಟ್ಟಿಗೆ ತಾಗಿಕೊಂಡೇ ತಿರುಮೂರ್ತಿ ಬೆಟ್ಟವಿದ್ದು ಅಲ್ಲಿಯೇ ತಿರುಮೂರ್ತಿ ದೇವಸ್ಥಾನವಿದೆ. ಶ್ರೀ ಅಮರಲಿಂಗೇಶ್ವರ ದೇವಸ್ಥಾನ ಮತ್ತು ತಿರುಮೂರ್ತಿ ಜಲಪಾತಗಳು ಈ ಬೆಟ್ಟ ಪ್ರದೇಶದಲ್ಲಿ ಕಾಣಬಹುದು. ಅತ್ರಿ ಮಹರ್ಷಿ ಮತ್ತು ಅವರ ಪತ್ನಿ ಅನುಸೂಯಾ ದೇವಿ ಈ ಬೆಟ್ಟದಲ್ಲಿ ವಾಸಿಸಿದ್ದರು ಮತ್ತು ಅವರ ಭಕ್ತಿಯನ್ನು ಪರೀಕ್ಷಿಸಲೊಮ್ಮೆ ಸ್ವತಃ ತ್ರಿಮೂರ್ತಿಗಳೇ ಇಲ್ಲಿಗೆ ಇಳಿದು ಬಂದಿದ್ದರು.
ಪರೀಕ್ಷಾರ್ಥವಾಗಿ ತ್ರಿಮೂರ್ತಿಗಳು ಅನುಸೂಯಾ ದೇವಿಯನ್ನು ಕುರಿತು ನಗ್ನವಾಗಿ ತಮ್ಮನ್ನು ಪೂಜಿಸಲು ಹೇಳಿದರು. ಅದಕ್ಕೆ ಒಪ್ಪಿಕೊಂಡ ಅನುಸೂಯಾ ದೇವಿಯು ತನ್ನ ಭಕ್ತಿಯ ಶಕ್ತಿಯಿಂದ ತ್ರಿಮೂರ್ತಿಗಳನ್ನು ಮಗುವಿನ ರೂಪವಾಗಿಸಿ ಪೂಜಿಸುತ್ತಾಳೆ. ಇದರಿಂದ ಸಂತುಷ್ಟಗೊಂಡ ದೇವತೆಗಳು ವರ ನೀಡಿ ತೆರಳುತ್ತಾರೆ. ತದನಂತರ ಈ ಬೆಟ್ಟಕ್ಕೆ ತ್ರಿಮೂರ್ತಿ ಎಂಬ ಹೆಸರು ಬಂದಿತು.


Click it and Unblock the Notifications