ದೂಧಾತೋಲಿ, ಪ್ರವಾಸಿಗರ ಅತ್ಯಂತ ಇಷ್ಟವಾದ ಮತ್ತು ಹೆಚ್ಚು ಜನರು ಭೇಟಿ ನೀಡುವ ಒಂದು ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 3100 ಮೀ ಎತ್ತರದಲ್ಲಿದೆ. ಥಾಲಿಸೈನ್, ಇಲ್ಲಿಗೆ ತಲುಪಲು ಹಾಗು ನಾವು ಇಳಿಯುವ ಕೊನೆಯ ಬಸ್ಸು ನಿಲ್ದಾಣವಾಗಿದೆ. ಥಾಲಿಸೈನ್ ನಿಂದ ಮುಂದಿನ 24 ಕಿ.ಮೀ ರಸ್ತೆಯನ್ನು ಚಾರಣ ಮಾಡಿ ದೂಧಾತೋಲಿ ತಲುಪಬೇಕಾಗುತ್ತದೆ. ದಾರಿಯಲ್ಲಿ ಕಾಣುವ ಹಿಮಾಲಯ ಪರ್ವತ ನಿಮ್ಮ ದಾರಿಯನ್ನು ಸುಗಮಗೊಳಿಸುತ್ತದೆ. ಗಡ್ವಾಲ್ ನ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ವೀರ್ ಚಂದ್ರ ಸಿಂಗ್ ಗಡ್ವಾಲ್, ಈ ಸ್ಥಳವನ್ನು ಬಹಳಷ್ಟು ಇಷ್ಟಪಟ್ಟಿದ್ದ ಹಾಗೂ ಅವನ ಕೊನೆಯ ಆಸೆಯ ಪ್ರಕಾರ ಆತನ ನೆನಪಿನಲ್ಲಿ ಇಲ್ಲಿ ಒಂದು ಸ್ಮಾರಕವನ್ನು ಕಟ್ಟಲಾಗಿದೆ.


Click it and Unblock the Notifications