ಕ್ರಿ.ಶ.8 ನೇ ಶತಮಾನದ ಆರಂಭದಲ್ಲಿ ವಿರೂಪಾಕ್ಷ ದೇವಾಲಯದ ಉತ್ತರ ಭಾಗದಲ್ಲಿ ಗಲಗನಾಥ ದೇವಾಲಯವನ್ನು ನಿರ್ಮಿಸಲಾಯಿತು. ಈ ದೇವಾಲಯದ ಅಂಗಳ ಪ್ರವೇಶಿಸುತ್ತಿದ್ದಂತೆ ಭಕ್ತರು ಸುಖಾಸನ ಹಾಗೂ ನವರಂಗದ ಜೊತೆಗೆ ವೃತ್ತಾಕಾರದಲ್ಲಿ ನಿರ್ಮಿಸಿರುವ ಪವಿತ್ರ ಸ್ಥಳದಲ್ಲಿರುವ ಶಿವಲಿಂಗವನ್ನೂ ನೋಡಬಹುದು. ಗಲಗನಾಥ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಕುಬೇರ ಹಾಗೂ ಗಜಲಕ್ಷ್ಮಿಯ ಚಿಕ್ಕ ವಿಗ್ರಗಳನ್ನೂ ಕಾಣಬಹುದು. ಪಟ್ಟದಕಲ್ಲು ನಗರದ ಅತ್ಯಂತ ಜನಪ್ರಿಯ ಪ್ರವಾಸಿತಾಣ ಇದಾಗಿದೆ.
ಈ ದೇವಾಲಯವನ್ನು ಮೂರು ಪ್ರಮುಖ ಗದ್ದಿಗೆ ಕಲ್ಲಿನ ಮೇಲೆ ನಿರ್ಮಾಣ ಮಾಡಲಾಗಿದೆ. ದೇವಾಲಯದ ಮಹಾ ಗುಡಾರದಲ್ಲಿರುವ ಶಿವನು ರಾಕ್ಷಸ ಅಂಧಕಾಸುರನನ್ನು ವಧಿಸುತ್ತಿರುವ ಶಿಲ್ಪಾಕೃತಿಯು ಅತ್ಯಂತ ಆಕರ್ಷಣೀಯವಾಗಿದೆ. ಸಮೀಪದಿಂದ ಪ್ರವಾಸಿಗರು ಈ ಶಿಲ್ಪವನ್ನು ಗಮನಿಸಿದಾಗ ಅಂಧಕಾಸುರನನ್ನು ವಧಿಸುತ್ತಿರುವ ಅಷ್ಟ ಕೈಗಳುಳ್ಳ ರೌದ್ರಾವತಾರದ ದೇವರು ಒಂದು ಕೈಯಲ್ಲಿ ಮಾನವನ ರುಂಡವನ್ನು ಮತ್ತೊಂದು ಕೈಯಲ್ಲಿ ತ್ರಿಶೂಲ ಹಿಡಿದು ಅಂಧಕಾಸುರನನ್ನು ಚುಚ್ಚುತ್ತಿರುವುದನ್ನು ಕಾಣಬಹುದು. ದೇವಾಲಯದ ಹೊರ ಭಾಗದ ಗೋಡೆಗಳ ಮೇಲೆ ಪುರಾಣ ಕಥೆಗಳ ಸುಂದರವಾದ ಚಿತ್ರಗಳನ್ನು ಹಾಗೂ ಉತ್ತಮ ಕಲಾಕೃತಿಗಳನ್ನು ಕಂಬಗಳ ಮೇಲೆಯೂ ಕೆತ್ತಲಾಗಿದೆ. ದೇವಾಲಯದ ಹೊರಭಾಗದಲ್ಲಿರುವ ಬಾಗಿಲುಗಳ ಮೇಲೆ ನಟರಾಜನ ಕಲಾಕೃತಿಯನ್ನು ಸುಂದರವಾಗಿ ಬಿಡಿಸಲಾಗಿದ್ದು ಕೆಳಭಾಗದಲ್ಲಿ ಗಂಗೆಯ ಚಿತ್ರವಿದೆ.


Click it and Unblock the Notifications