Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟ್ಟದಕಲ್ಲು » ಆಕರ್ಷಣೆಗಳು » ವಿರೂಪಾಕ್ಷ ದೇವಾಲಯ

ವಿರೂಪಾಕ್ಷ ದೇವಾಲಯ, ಪಟ್ಟದಕಲ್ಲು

2

ಮಹಾರಾಣಿ ತ್ರಿಲೋಕ್ಯಾಮಹಾದೇವಿ ಕ್ರಿ.ಶ.740ರಲ್ಲಿ ತನ್ನ ಪತಿ ಎರಡನೇ ವಿಕ್ರಮಾಧಿತ್ಯ ಪಲ್ಲವರ ರಾಜರ ವಿರುದ್ಧ ಯುದ್ಧದಲ್ಲಿ ಗೆದ್ದ ನೆನಪಿಗಾಗಿ ಈ ದೇವಾಲಯ ನಿರ್ಮಾಣ ಮಾಡಿದರು.ಇದು ಕರ್ನಾಟಕ ರಾಜ್ಯದ ಅತೀ ಪುರಾತನ ದೇವಾಲಯವಾಗಿದ್ದು ಸುಮಾರು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.ಕಂಚಿಯಲ್ಲಿರು ಕೈಲಾಸನಾಥ ದೇವಾಲಯದ ಮಾದರಿಯನ್ನೇ ನೆನಪಿಸುವ ವಾಸ್ತುಶಿಲ್ಪವನ್ನು ಹೊಂದಿರುವ ವಿರೂಪಾಕ್ಷ ದೇವಾಲಯ ಅತ್ಯಂತ ಸುಂದರ ಹಾಗೂ ಆಕರ್ಷಣೀಯವಾಗಿದೆ.

ಈ ದೇವಾಲಯಕ್ಕೆ ಭೇಟಿ ಮಾಡುವ ಪ್ರವಾಸಿಗರು ಹಿಂದೂ ದೇವತೆಗಳಾದ ಉಗ್ರನರಸಿಂಹ, ನಟರಾಜ, ರಾವಣಾನುಗ್ರಹ ಮತ್ತು ಲಿಂಗೋದ್ಭವ ಇವುಗಳನ್ನು ಕಾಣಬಹುದು. ಒಳಭಾಗದ ಅಲಂಕಾರಕ್ಕೆ ಕೆತ್ತನೆ ಕೆಲಸಗಳು, ರೇಖಾ ಚಿತ್ರಗಳನ್ನು ಬಳಸಲಾಗಿದೆ. ರಾಮಾಯಣ, ಭಗವದ್ಗೀತೆ, ಮಹಾಭಾರತ ಹಾಗೂ ಗೀರ್ತಾರ್ಜನೆಯಲ್ಲಿನ ಪ್ರಮುಖ ಘಟನೆಗಳನ್ನು ಇಲ್ಲಿನ ಸಭಾ-ಮಂಟಪದ ಕಂಬಗಳ ಮೇಲೆ ಅಂದವಾಗಿ ಚಿತ್ರಿಸಲಾಗಿದೆ. ದೇವಾಲಯದ ಇತರ ಭಾಗಗಳಲ್ಲೂ ಅನೇಕ ವಿಧವಾದ ವಿಶೇಷ ವಿನ್ಯಾಸಗಳಿಂದ ಅಲಂಕೃತಗೊಳಿಸಲಾಗಿದೆ.

ವಿರೂಪಾಕ್ಷ ದೇವಾಲಯದ ಪೂರ್ವ ಭಾಗದಲ್ಲಿ ಭಕ್ತರಿಗಾಗಿ ಇದರ ನಾಲ್ಕು ದಿಕ್ಕಿನಲ್ಲೂ ತೆರೆಯಲ್ಪಟ್ಟಿರುವ ನಂದಿ-ಮಂಟಪವಿದೆ. ಶಿವನ ವಾಹನವಾದ ನಂದಿಯ ದೊಡ್ಡ ಚಿತ್ರವು ನಂದಿ-ಮಂಟಪದ ಒಳಗಿರುವ ಎತ್ತರದ ವೇದಿಕೆಯಲ್ಲಿದೆ. ರಾಜ ಎರಡನೇ ವಿಕ್ರಮಾದಿತ್ಯನು ಹೇಗೆ ಕಾಂಚಿಪುರವನ್ನು ವಶಪಡಿಸಿಕೊಂಡನು ಎಂಬ ಚಿತ್ರಣವನ್ನು ಪೂರ್ವದ ಬಾಗಿಲಿನ ಸಮೀಪದಲ್ಲಿ ಚಿತ್ರೀಕರಿಸಲಾಗಿದೆ. ಈ ದೇವಾಲಯವು ಅತ್ಯಂತ ಮಹತ್ವವನ್ನು ಹೊಂದಿರುವುದರಿಂದ ಪಟ್ಟದಕಲ್ಲಿಗೆ ಬರುವ ಎಲ್ಲಾ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬೇಕೆಂದು ಇತಿಹಾಸ ತಜ್ಞರು ಸಲಹೆ ನೀಡುತ್ತಾರೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri