Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟ್ಟದಕಲ್ಲು » ಆಕರ್ಷಣೆಗಳು » ಪಾಪನಾಥ ದೇವಾಲಯ

ಪಾಪನಾಥ ದೇವಾಲಯ, ಪಟ್ಟದಕಲ್ಲು

1

ವಿರೂಪಾಕ್ಷ ದೇವಾಲಯದ ದಕ್ಷಿಣ ಭಾಗದಲ್ಲಿ ಮುಖೇಶ್ವರನಿಗಾಗಿ ನಿರ್ಮಿಸಿರುವುದೇ ಪಾಪನಾಥೇಶ್ವರ ದೇವಾಲಯವಾಗಿದೆ. ಕ್ರಿ.ಶ. 740 ರಲ್ಲಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಯಿತು ಎಂದು ತಿಳಿದು ಬಂದಿದೆ. ದೇವಾಲಯದ ಒಳಭಾಗದ ಪ್ರವೇಶದ್ವಾರದಲ್ಲಿ ನಂದಿ ಹಾಗೂ ವೀರಭದ್ರನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಪ್ರಮುಖ ಮಹಾಮಂಟಪದ ಮೇಲ್ಛಾವಣಿಯನ್ನು 16 ಕಂಬಗಳ ಸಹಾಯದಿಂದ ನಿಲ್ಲಿಸಿರುವುದನ್ನು ಪ್ರವಾಸಿಗರು ಕಾಣಬಹುದು.

ಕಂಬಗಳ ಮೇಲೆ ಹಾಗೂ ಗೋಡೆಗಳ ಮೇಲೆ ಸ್ತ್ರೀಯರ ಹಾಗೂ ದಂಪತಿಯರ ರತಿವಿಲಾಸದ ಚಿತ್ರಗಳನ್ನೂ ಕೆತ್ತಲಾಗಿದೆ. ದೇವಾಲಯದ ಅರ್ಧ ಮಂಟಪದ ಮೇಲ್ಛಾವಣಿಯಲ್ಲಿ ಸಂಗೀತಗಾರರ ನಡುವೆ ಶಿವ ಹಾಗೂ ಪಾರ್ವತಿಯರ ವಿಗ್ರಹಗಳನ್ನೂ ಇಲ್ಲಿ ಕಾಣಬಹುದು. ಹಿಂದು ಪುರಾಣ ಹಾಗೂ ರಾಮಾಯಣದ ಕಥೆಗಳ ಪ್ರಮುಖ ಚಿತ್ರಣಗಳನ್ನು ಇಲ್ಲಿ ನಿರ್ಮಿಸಿರುವುದ ಅತ್ಯಂತ ವಿಶೇಷವಾಗಿ ಆಕರ್ಷಿಸುತ್ತದೆ.

ಈ ದೇವಾಲಯದ ಪ್ರವೇಶ ಸ್ಥಳದಲ್ಲಿ ಪುರಾತನ ಕಕ್ಷಾಸನ, ಸಭಾ-ಮಂಟಪ,ಅರ್ಧ-ಮಂಟಪ ಹಾಗೂ ಪವಿತ್ರ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಲು ನಿರ್ಮಿಸಿರುವ ಮಾರ್ಗವಿದೆ. ಇಲ್ಲಿನ ಸಭಾ-ಮಂಟಪದಲ್ಲಿ ನಂದಿಯ ದೊಡ್ಡ ಹಾಗೂ ವಿಶೇಷವಾದ ಚಿತ್ರವಿದ್ದರೂ ದೇವಾಲಯದಲ್ಲಿ ನಂದಿ-ಮಂಟಪ ಇಲ್ಲದಿರುವುದೇ ವಿಶೇಷವಾಗಿದೆ. ಪಟ್ಟದಕಲ್ಲಿನಲ್ಲಿರುವ ಈ ದೇವಾಲಯ ನೋಡಲೇ ಬೇಕಾದ ಸ್ಥಳ ಎಂಬುದನ್ನು ಇಲ್ಲಿನ ಚಿತ್ರಕಲೆಗಳ ಹಾಗೂ ವಾಸ್ತುಶಿಲ್ಪಗಳೇ ಸಾರಿ..ಸಾರಿ ಹೇಳುತ್ತವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue