ಪಾನ್ಗಿನ್ ಪಾಸಿಘಾಟಿನಿಂದ ಅರವತ್ತು ಕಿಲೋಮೀಟರ್ ದೂರದಲ್ಲಿರುವ ಸಣ್ಣ ಹಳ್ಳಿ. ಇದು ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯ ಪಾನ್ಗಿನ್ ಮಂಡಲ್ ನಲ್ಲಿದೆ. ಇದು ಅತ್ಯಂತ ಆಕರ್ಷಣೀಯವಾಗಿದ್ದು ಇಲ್ಲಿ ಸಿಯೋಮ್ ನದಿ ಸಿಯಾಂಗ್ ನದಿಯನ್ನು ಕೂಡುತ್ತದೆ.
ಅದ್ಭುತ ನೋಟದ ಹೊರತಾಗಿ ಪಾನ್ಗಿನ್ ನಲ್ಲಿ ಹಚ್ಚ ಹಸಿರಿನ ಮತ್ತು ಶುಭ್ರ ಆಕಾಶದ ವಾತಾವರಣವಿದೆ. ಅಲ್ಲದೇ, ಈ ಪ್ರದೇಶವು ಹಲವು ವೈದ್ಯಕೀಯ ಸಸಿಗಳ ತಾಣವೂ ಆಗಿದೆ. ಪ್ರಾಣಿ ಶಾಸ್ತ್ರಜ್ಞರು ಈ ಹಳ್ಳಿಯನ್ನು ಸಂಶೋಧನೆಗಾಗಿರುವ ಪ್ರಮುಖ ಕೇಂದ್ರವೆನ್ನುತ್ತಾರೆ. ಇದು ವನ್ಯಜೀವಿಗಳ ತಾಣವೂ ಕೂಡಾ.
ಈ ಸ್ಥಳವು ನೈಸರ್ಗಿಕ ಸಂಪತ್ತುಗಳ ಬಗ್ಗೆ ಆಸಕ್ತಿಯಿದ್ದವರಿಗೆ ಅತ್ಯಂತ ಸೂಕ್ತ ಸ್ಥಳ. ಹಾಗಾಗಿ ನೈಸರ್ಗಿಕ ಅದ್ಭುತವಾಗಿರುವ ಈ ಪ್ರದೇಶಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯ ಬಹುದಾಗಿದೆ.


Click it and Unblock the Notifications