ಬಾಬಾ ಗರೀಬ್ನಾಥ್ ದೇವಾಲಯ ಇಲ್ಲಿನ ಇನ್ನೊಂದು ಪ್ರಸಿದ್ದ ಪ್ರವಾಸಿ ಆಕರ್ಷಣೆ. ಇದು ಪೌಂಟಾ ಸಾಹಿಬ್ನಿಂದ ಕೇವಲ 8 ಕಿಮೀ ಅಂತರದಲ್ಲಿದೆ. ಇಲ್ಲಿ ಪ್ರಾರ್ಥನೆ ಮಾಡಿಕೊಂಡರೆ ಸಂತಾನ ಭಾಗ್ಯ ಸಿಗುತ್ತದೆ ಎಂಬ ನಂಬಿಕೆಯಿದ್ದು, ಮಕ್ಕಳಿಲ್ಲದ ಮಹಿಳೆಯರ ಪವಿತ್ರ ತಾಣವೆಂದು ಇದು ಪರಿಗಣಿಸಲ್ಪಟ್ಟಿದೆ.
ಸಮೃದ್ಧ ಹಸಿರು ಸಾಲ್ ಮರಗಳು ಇಲ್ಲಿನ ಸೌಂದರ್ಯವನ್ನು ಹಚ್ಚಿಸಿವೆ. ಪೌಂಟಾ ಸಾಹಿಬ್ನಿಂದ ಬಸ್ ಮೂಲಕ ಸುಲಭವಾಗಿ ಇಲ್ಲಿಗೆ ಬರಬಹುದು.


Click it and Unblock the Notifications