ಪೌಂಟಾ ಸಾಹಿಬ್ಗೆ ಅತೀ ಸಮೀಪದಲ್ಲಿ ಅಂದರೆ ಕೇವಲ 4.5 ಕಿಮೀ ದೂರದಲ್ಲಿರುವ ಭಕ್ತಿಕೇಂದ್ರ ಪಾಟ್ಲಿಯಾನ್ನಲ್ಲಿರುವ ಶಿವ ದೇವಾಲಯ.ಇದು ಇಲ್ಲಿಯ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಪ್ರಾಚೀನ ದೇವಾಲಯದಲ್ಲಿ ನೆಲೆಸಿರುವ ಹಿಂದೂ ದೇವತೆ ಶಿವ, ದುಷ್ಟ ವಿನಾಶಕನೆಂದೂ ನಂಬಲಾಗಿದೆ. ಈ ದೇವಾಲಯದ ಸುತ್ತಲೂ ಹಸಿರು ಭತ್ತದ ಗದ್ದೆಗಳು, ಸಾಲ್ಮರಗಳು ಸುತ್ತುವರಿದಿದ್ದು, ಸಂದರ್ಯವನ್ನು ಹೆಚ್ಚಿಸಿವೆ. ಭಕ್ತಿಯನ್ನು ಹುಟ್ಟಿಸುವ ಇಲ್ಲಿನ ಶಿವಲಿಂಗ ಕಾಲದಿಂದ ಕಾಲಕ್ಕೆ ಬೆಳೆಯುತ್ತಿದೆ ಎಂಬ ನಂಬಿಕೆಯೂ ಭಕ್ತರಲ್ಲಿದೆ.


Click it and Unblock the Notifications