Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಣಿಪತ್ » ಆಕರ್ಷಣೆಗಳು » ಬು-ಅಲಿ ಶಾ ಕಲಂಧರರ ಗೋರಿ

ಬು-ಅಲಿ ಶಾ ಕಲಂಧರರ ಗೋರಿ, ಪಾಣಿಪತ್

1

ಬು-ಅಲಿ ಶಾ ಕಲಂಧರ್ ಗೋರಿಯ ಹೆಸರೇ ಸೂಚಿಸುವಂತೆ ಇದು ಬು-ಅಲಿ ಶಾ ಕಲಂಧರರ ಸ್ಮರಣಾರ್ಥ ಕಟ್ಟಿಸಿರುವ ಗೋರಿಯಾಗಿದೆ. ಇವರ ನಿಜ ನಾಮಧೇಯ ಷೇಕ್ ಶರ್ಫುದಿನ್ ಎಂದಾಗಿತ್ತು. ಇವರ ತಂದೆ ಷೇಕ್ ಫಖರುದ್ಧೀನ್ ಎಂಬುವವರು ಆ ಕಾಲದ ಒಬ್ಬ ಪ್ರಸಿದ್ಧ ಸಂತ ಮತ್ತು ವಿದ್ವಾಂಸರಾಗಿದ್ದರು.

ಕಲಂಧರ್ ಎಂದರೆ ಮಾನವನಾಗಿದ್ದರು, ಐಹಿಕ ಸುಖ ಭೋಗಗಳ ಹೊರತಾಗಿ ಆಧ್ಯಾತ್ಮಿಕ ಲೋಕದಲ್ಲಿ ಸುಖವನ್ನು ಕಾಣುವ ವ್ಯಕ್ತಿಯೆಂದರ್ಥ.

ಬು-ಅಲಿ ಶಾ ಕಲಂಧರ್ ಎಂಬುವವರು ಮೂಲತಃ ಒಬ್ಬ ಸಂತ. ಇವರು ಭಿಕ್ಷೆಯನ್ನು ಬೇಡುತ್ತಿರಲಿಲ್ಲ. ಆದರೆ ಸ್ವಯಂ ಸ್ಫೂರ್ತಿಯಿಂದ ಯಾರು ಏನೇ ನೀಡಿದರು ಅದನ್ನು ಸ್ವೀಕರಿಸಿ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಇವರು ಸುಮಾರು ಕ್ರಿ.ಶ. 1190ರಲ್ಲಿ ಜನಿಸಿದರು ಮತ್ತು ಕ್ರಿ.ಶ.1312 ರಲ್ಲಿ ಅಂದರೆ ತಮ್ಮ 122ನೇ ವರ್ಷದಲ್ಲಿ ಮರಣಿಸಿದರು. 700 ವರ್ಷಗಳಷ್ಟು ಹಳೆಯದಾದ ಈ ಗೋರಿಯನ್ನು ಅಲ್ಲಾ-ಉದ್-ದಿನ್ ಖಿಲ್ಜಿಯ ಮಕ್ಕಳಾದ ಖಿಝಿರ್ ಖಾನ್ ಮತ್ತು ಶಾದಿ ಖಾನ್‍ರವರು ನಿರ್ಮಿಸಿದರು.

ಈ ಗೋರಿಯು ಕಲಂಧರ್ ಚೌಕ್ ಎಂದೇ ಕರೆಯಲ್ಪಡುವ ಸ್ಥಳದಲ್ಲಿ ನೆಲೆಗೊಂಡಿದೆ. ಇದು ಈ ನಗರದ ಹೃದಯಭಾಗದಲ್ಲಿ ನೆಲೆಗೊಂಡಿದೆ. ಈ ಗೋರಿಯಲ್ಲಿ ಖ್ವಾಜಾ ಅಲ್ಟಫ್ ಹುಸ್ಸೇನ್ ಹಲಿ ಪಾಣಿಪಟ್ಟಿಯವರ ಸಮಾಧಿಯನ್ನು ಸಹ ನಾವು ನೋಡಬಹುದು. ಪ್ರತಿ ಗುರುವಾರದಂದು ಇಲ್ಲಿಗೆ ಭಕ್ತಾಧಿಗಳು ಯಾವುದೇ ಧರ್ಮಭೇದವಿಲ್ಲದೆ ಬಂದು ತಮ್ಮ ಹರಕೆಗಳನ್ನು ಸಲ್ಲಿಸುತ್ತಾರೆ.

One Way
Return
From (Departure City)
To (Destination City)
Depart On
19 Jun,Fri
Return On
20 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Jun,Fri
Check Out
20 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Jun,Fri
Return On
20 Jun,Sat