ಪನ್ಹಾಲಾ ಕೋಟೆಯು ಪನ್ಹಾಲಾ ಪಟ್ಟಣದಲ್ಲಿ ಗುರುತಿಸುವಂತಹ ಆಕರ್ಷಣೀಯವಾದ ಕೋಟೆಯಾಗಿದೆ. ಇದು ಈ ಪಟ್ಟಣದ ಹೆಸರಿನಿಂದಲೆ ಕರೆಯಲ್ಪಟ್ಟಿದ್ದು ಡೆಕ್ಕನ್ ಪ್ರದೇಶದ ಅತಿ ದೊಡ್ಡದಾದ ಮತ್ತು ಭವ್ಯವಾದ ಕೋಟೆಯಾಗಿದೆ. ಈ ಸ್ಮಾರಕವು ಸುಮಾರು 900 ವರ್ಷಗಳ ಹಿಂದೆ ಅಂದರೆ ಸುಮಾರು 12 ನೇ ಶತಮಾನದಲ್ಲಿ ರಾಜ ಬೋಜ ನಿಂದ ಸ್ಥಾಪಿಸಲ್ಪಟ್ಟಿತು.
ಈ ಕೋಟೆಯನ್ನು ರಕ್ಷಣಾ ಉದ್ದೇಶಗಳಿಗಾಗಿ ನಿರ್ಮಿಸಲಾಗಿದ್ದು, ಗಟ್ಟಿಮುಟ್ಟಾದ ಜೋಡಿ ಗೋಡೆಯುಳ್ಳ ಪ್ರವೇಶ ದ್ವಾರದ ಮೂಲಕ ಇದನ್ನು ಪ್ರವೇಶಿಸಬಹುದಾಗಿತ್ತು. ಈ ಐತಿಹಾಸಿಕ ಹೆಗ್ಗುರುತು ನಿಮ್ಮನ್ನು ಭಾರತದ ಶ್ರೇಷ್ಠ ಆಡಳಿತಗಾರರಲ್ಲೊಬ್ಬರಾದ ಮರಾಠರ ಸಮಯಕ್ಕೆ ಕೊಂಡೊಯ್ಯುತ್ತದೆ.
ಈ ಕೋಟೆಯು ಪ್ರವಾಸಿಗರನ್ನು ಆಕರ್ಷಿಸುವಂತದ್ದಾಗಿದ್ದು, ದಶಕಗಳ ಹಿಂದಿನ ಘಟನೆಗಳನ್ನು ವಿವರಿಸುತ್ತದೆ.


Click it and Unblock the Notifications