Search
  • Follow NativePlanet
Share
ಮುಖಪುಟ » ಸ್ಥಳಗಳು » ಪಣಜಿ » ಆಕರ್ಷಣೆಗಳು » ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ಆಂಡ್ ಕಾನ್ವೇಂಟ್

ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ಆಂಡ್ ಕಾನ್ವೇಂಟ್, ಪಣಜಿ

7

ಗೋವಾದ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ಆಂಡ್ ಕಾನ್ವೇಂಟ್ ನ ಉಪಸ್ಥಿತಿಯು ಸುಮಾರು 1500 ರ ಶತಕಕ್ಕೆ ಕರೆದೊಯ್ಯುತ್ತದೆ. ಇದರ ಮೂಲವು 'ಏಟ್ ಫ್ರಾನ್ಸಿಸ್ಕನ್ ಫ್ರಿಯರ್ಸ್' ಗೆ ಸಂಬಂಧಿಸಿದೆ. ಲ್ಯಾಟರೈಟ್ ಕಲ್ಲುಗಳಿಂದ ನಿರ್ಮಿಸಲ್ಪಟ್ಟಂತಹ ಈ ಚರ್ಚ್, ಟಸ್ಕನ್ ಮತ್ತು ಮನುಲೈನ್ ವಾಸ್ತುಶಿಲ್ಪದ ಮೂಲಗಳನ್ನು ಆಧರಿಸಿ ರಚಿಸಲಾಗಿದ್ದು, ಸಾವಿರಾರು ಕ್ಯಾಥೋಲಿಕ್ ಮತ್ತು ನಾನ್-ಕ್ಯಾಥೋಲಿಕ್ ಪಂಗಡದವರನ್ನು ಆಕರ್ಷಿಸುತ್ತದೆ. ಮೂಲತಹವಾಗಿ ಈ ಚರ್ಚ್ ಏಟ್ ಫ್ರಾನ್ಸಿಸ್ಕನ್ ಫ್ರಿಯರ್ಸ್ ನಿಂದ ನಿರ್ಮಿಸಲಾಗಿದ್ದು, ತದನಂತರ 1661 ರಲ್ಲಿ ನಾಶಗೊಳಿಸಿ, ತರುವಾಯ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ಯನ್ನು ಸ್ಥಾಪಿಸಲಾಯಿತು.ಈ ಚರ್ಚ್ ನ್ನು ಗೋವಾದಲ್ಲಿ ನಿರ್ಮಿಸಲಾಗಿದ್ದರೂ ಸಹ, ಇಲ್ಲಿರುವ ಹಲವು ಮೂರ್ತಿಗಳನ್ನು ಬೇರೆ ಇತರೆ ಪ್ರಸಿದ್ಧ ಭಾಗಗಳಿಂದ ತರಲಾಗಿದೆ. ಅದರಲ್ಲೂ ವಿಶೇಷವಾಗಿ 'ಅವರ್ ಲೇಡಿ ಆಫ್ ಮಿರಾಕಲ್ಸ್' ಮೂರ್ತಿಯನ್ನು ಶ್ರೀಲಂಕಾದ ಜಾಫ್ನಾದಿಂದ ತರಲಾಗಿದೆ. ಚರ್ಚ್ ನ ಬಹುಭಾಗದಲ್ಲಿ ಮೊಸೈಕ್ ಕೊರಿಂಥಿಯನ್ ವಿನ್ಯಾಸವನ್ನು ನೋಡಬಹುದಾಗಿದ್ದು, ಇಲ್ಲಿನ ಮುಖ್ಯ ಅಲ್ಟರ್ ಸಂತ ಫ್ರಾನ್ಸಿಸ್ ಗೆ ಸಮರ್ಪಿತವಾಗಿದೆ. ಅಲ್ಟರ್ ನಲ್ಲಿ ಕಟ್ಟಿಗೆ ಆಧಾರಿತ ಪೇಂಟಿಂಗ್ ಗಳೂ ಸಹ ಇದ್ದು ಸಂತ ಫ್ರಾನ್ಸಿಸ್ ಆಫ್ ಅಸ್ಸಿಸಿ ಅವರ ಜೀವನಕಥೆಯನ್ನು ಬಿಂಬಿಸುತ್ತವೆ. ಇವುಗಳಲ್ಲದೆ, ಸಂತ ಫ್ರಾನ್ಸಿಸ್ ಆಫ್ ಅಸ್ಸಿಸಿಯ ವಿಗ್ರಹವಿದ್ದು, ದೊಡ್ಡದಾದ ಶಿಲುಬೆಯನ್ನೂ ಕಾಣಬಹುದು. ಸಂತ ಫ್ರಾನ್ಸಿಸ್ ಅವರು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಂತಹ ಬಡತನ, ದಯೆ ಮತ್ತು ವಿಧೇಯತೆ ಮೂರು ತತ್ವಗಳನ್ನು ವಿಗ್ರಹದ ಕೆಳಗಡೆ ಕೆತ್ತಲಾಗಿದೆ. ಗೋವಾದ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ಆಂಡ್ ಕಾನ್ವೇಂಟ್ ಪೂರ್ವ ದಿಕ್ಕಿನ ಸ್ವಲ್ಪ ಒಳಭಾಗದಲ್ಲಿ ನೆಲೆಸಿದ್ದು ಕರ್ಮಾಲಿ ರೈಲು ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಪಣಜಿ, ವಾಸ್ಕೊ ಮತ್ತು ಮಾರ್ಗೊ ಮುಂತಾದ ಹಲವು ಭಾಗಗಳಿಂದ ಇಲ್ಲಿಗೆ ತಲುಪಲು ಕ್ಯಾಬ್ ಗಳು ಲಭ್ಯವಿದೆ. ಇಲ್ಲಿಗೆ ಹೋಗುವಾಗ, ರಸ್ತೆಯ ನಡುವೆ ಹಲವಾರು ರಿಸಾರ್ಟ್ ಗಳು ಮತ್ತು ಫೆರ್ರಿ ಸವಾರಿಗೆ ಅವಕಾಶವಿದ್ದು, ಇಷ್ಟವಿದ್ದಲ್ಲಿ ಪ್ರವಾಸಿಗರು ಇದರ ಆನಂದವನ್ನು ಪಡೆಯಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu