ಚಾರಣ, ಪಾಲಂಪೂರ್

ಚಾರಣ ಪಾಲಂಪೂರದ ಪ್ರಮುಖ ಪ್ರವಾಸಿ ಚಟುವಟಿಕೆಗಳಲ್ಲೊಂದು. ಪಾಲಂಪೂರ ಮತ್ತು ಚಂಬಾ ಕಣಿವೆಯ ಮಧ್ಯೆ ಧೌಲಾಧರ್ ಪರ್ವತ ಶ್ರೇಣಿಗೆ ಹಲವಾರು ಚಾರಣದ ಹಾದಿಗಳು ಸಾಗಿ ಹೋಗುತ್ತವೆ. ಪಾಲಂಪೂರದಿಂದ ಹೋಲಿಗೆ ಶಿಂಗಾರ್ ಪಾಸ್, ಪಾಲಂಪೂರದಿಂದ ಧರ್ಮಶಾಲಾಕ್ಕೆ ಇಂದ್ರಹಾರ್ ಪಾಸ್ ಮತ್ತು ವೈಜನಾಥ್ ದಿಂದ ಮನಾಲಿಗೆ ತಮ್ಸಾರ್ ಪಾಸ್ ಇವು ಗಮನಿಸಿತಕ್ಕ ಚಾರಣದ ಮಾರ್ಗಗಳು. ಇವುಗಳನ್ನು ಕ್ರಮಿಸಲು ಕನಿಷ್ಟ 5 ರಿಂದ 8 ದಿನ ಬೇಕು. ಚಾರಣ ಮಾಡುವಾಗ ಮನಮೋಹಕ ನೋಟ ಕಣ್ಮುಂದೆ ಸಿಗುತ್ತದೆ. ಮೇ ಮತ್ತು ಅಕ್ಟೋಬರ್ ತಿಂಗಳ ಮಧ್ಯಭಾಗ ಚಾರಣಕ್ಕೆ ಪ್ರಶಸ್ತ ಸಮಯ.

Please Wait while comments are loading...