ತರ್ಸರ್ ಕೆರೆಯು ಪಹಲ್ಗಾಂನಿಂದ 34 ಕಿ.ಮೀ ದೂರದಲ್ಲಿದ್ದು, ಸಮುದ್ರ ಮಟ್ಟದಿಂದ 3962 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇಲ್ಲಿನ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ವಿಶ್ವದ ಎಲ್ಲೆಡೆಯಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಪ್ರವಾಸಿಗರು ತರ್ಸಾರ್ ಕೆರೆಯನ್ನು ತಲುಪಲು ನೆಲದ ಮಟ್ಟದಿಂದ 243 ಮೀಟರ್ ಎತ್ತರದಲ್ಲಿರುವ ಒಂದು ತೂಗುಸೇತುವೆಯನ್ನು ಹಾದು ಹೋಗಬೇಕು. ಈ ಸ್ಥಳಕ್ಕೆ ತಲುಪಬೇಕೆಂದು ಬಯಸುವವರು ಲಿಡ್ಡರ್ ವಾಟ್ ಮೂಲಕ ಹಾದು ಹೋಗಬೇಕು. ಸಿಕಿವಾಸ್ ಎಂಬ ಪ್ರದೇಶವು ಈ ಕೆರೆಯಿಂದ 24 ಕಿ.ಮೀ ದೂರದಲ್ಲಿದ್ದು, ಶಿಬಿರ ಹಾಕಲು ಹೇಳಿ ಮಾಡಿಸಿದ ತಾಣವಾಗಿದೆ.


Click it and Unblock the Notifications