Search
  • Follow NativePlanet
Share
ಮುಖಪುಟ » ಸ್ಥಳಗಳು » ಊಟಿ » ಆಕರ್ಷಣೆಗಳು » ಗ್ಲೆನ್‍ಮೋರ್ಗನ್

ಗ್ಲೆನ್‍ಮೋರ್ಗನ್, ಊಟಿ

0

ಗ್ಲೆನ್‍ಮೋರ್ಗನ್ ಊಟಿಯಿಂದ 25 ಕಿ.ಮೀ ದೂರದಲ್ಲಿರುವ ಒಂದು ಸುಂದರವಾದ ಗ್ರಾಮವಾಗಿದ್ದು, ಪ್ರವಾಸಿಗರ ವಲಯದಲ್ಲಿ ಭಾರೀ ಪ್ರಸಿದ್ಧಿಯನ್ನು ಸಂಪಾದಿಸಿದೆ. ಈ ಗ್ರಾಮದ ವಿಶೇಷತೆಯು ಇಲ್ಲಿನ ಸುತ್ತ ಮುತ್ತಲ ಬೆಟ್ಟಗಳಲ್ಲಿ ಬೆಳೆದು ನಿಂತಿರುವ ಟೀ ತೋಟಗಳಲ್ಲಿ ಅಡಗಿದೆ.

ಗ್ಲೆನ್‍ಮೋರ್ಗನ್‍ನಲ್ಲಿರುವ ಪ್ರಸಿದ್ಧ ಆಕರ್ಷಣೆಯೆಂದರೆ ಇಲ್ಲಿರುವ ರೋಪ್ ವೇ. ಈ ರೋಪ್ ವೇಯನ್ನು ಜಲ ವಿದ್ಯುತ್ ಸ್ಥಾವರದಿಂದ (ಸಿಂಗರ ಬಳಿ ನೆಲೆಸಿದೆ) ಈ ಹಳ್ಳಿಗೆ ಹೋಗುವ ಸಂಪರ್ಕ ಸಾಧನವಾಗಿ ಬಳಸಲಾಗುತ್ತಿತ್ತು. ಈ ರೋಪ್ ವೇಯನ್ನು 980 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದ್ದು, 3 ಕಿ.ಮೀ ಉದ್ದವಿದೆ. ಈ ರೋಪ್ ವೇಯು ಜರ್ಮನ್ ಪಾಯಿಂಟ್ ಎಂಬಲ್ಲಿ  41 ಡಿಗ್ರಿಯಷ್ಟು ವಾಲಿದೆ. ಏರುತ್ತ, ಇಳಿಯುತ್ತ ಸಾಗುವ ರೋಪ್ ವೇಯು ಜರ್ಮನ್ ಪಾಯಿಂಟ್ ಬಳಿ ಬರುವಷ್ಟರಲ್ಲಿ ಈ ವಾಲುವಿಕೆಯಿಂದಾಗಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಜಲ ವಿದ್ಯುತ್ ಸ್ಥಾವರಕ್ಕೆ ಕೆಲಸಕ್ಕೆ ಹೋಗುವವರು ಇದನ್ನು ಬಳಸಿಕೊಂಡೆ ಹೋಗಿ ಬರುತ್ತಿರುತ್ತಾರೆ.

ಇಲ್ಲಿರುವ ಟೀ ಎಸ್ಟೇಟ್‍ಗಳಲ್ಲಿ ಸಿಗುವ ಅದ್ಭುತವಾದ ನೋಟಗಳಿಗಾಗಿ ಪ್ರವಾಸಿಗರ ವಲಯದಲ್ಲಿ ಈ ಗ್ರಾಮವು ಪ್ರಸಿದ್ಧ ವಿಹಾರ ತಾಣವಾಗಿ ಖ್ಯಾತಿ ಪಡೆದಿದೆ.

ಈ ಗ್ರಾಮವು ಪ್ರವಾಸಿಗರ ವಲಯದಲ್ಲಿ ಭಾರೀ ಆಕರ್ಷಣೆಯನ್ನು ಸಂಪಾದಿಸಿದೆ. ಇಲ್ಲಿರುವ ಟೀ ಎಸ್ಟೇಟ್‍ಗಳನ್ನು ನೋಡುವ ಮತ್ತು ಇಲ್ಲಿ ವಿಹರಿಸುವ ಸಲುವಾಗಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue