Search
  • Follow NativePlanet
Share
ಮುಖಪುಟ » ಸ್ಥಳಗಳು » ಊಟಿ » ಆಕರ್ಷಣೆಗಳು » ವೆನ್‍ಲಾಕ್ ಡೌನ್ಸ್

ವೆನ್‍ಲಾಕ್ ಡೌನ್ಸ್, ಊಟಿ

1

ವೆನ್‍ಲಾಕ್ ಡೌನ್ಸ್ ಎಂಬುದು ಊಟಿಗೆ ಸಮೀಪದಲ್ಲಿರುವ ಅತ್ಯಂತ ಪ್ರಸಿದ್ಧ ವಿಹಾರ ತಾಣವಾಗಿದೆ. ಇಲ್ಲಿರುವ ಸುಂದರ ಹೊರಾಂಗಣದ ಕಾರಣದಿಂದ ಇದು ಅತ್ಯಂತ ಪ್ರಸಿದ್ಧ ಚಲನ ಚಿತ್ರ ಚಿತ್ರೀಕರಣ ತಾಣವಾಗಿ ಗುರುತಿಸಿಕೊಂಡಿದೆ. ಅದ್ಭುತವಾದ ಗಿರಿ ಶಿಖರಗಳು, ಹಸಿರಿನಿಂದ ನಳನಳಿಸುವ ಭೂ ಪ್ರದೇಶ, ವಿಶಾಲವಾದ ಬಯಲು, ಎಲ್ಲೆಲ್ಲಿ ನೋಡಿದರು ಹಚ್ಚ ಹಸಿರು ನಿಮ್ಮನ್ನು ಆನಂದದಿಂದ ಪುಳಕಿತರಾಗುವಂತೆ ಮಾಡುತ್ತದೆ. ವೆನ್‍ಲಾಕ್ ಡೌನ್ಸ್ ಸುಮಾರು 20,000 ಎಕರೆ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಅಲ್ಲದೆ ಇಡೀ ಪ್ರದೇಶವು ಭವ್ಯವಾಗಿ ಮುಗಿಲೆತ್ತರಕ್ಕೆ ನಿಂತಿರುವ ನೀಲಗಿರಿ ಮರಗಳಿಂದ ಕೂಡಿದೆ.

ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಈ ಪ್ರದೇಶವು ಯೂರೋಪಿಯನ್ನರ ನೆಚ್ಚಿನ ವಿಹಾರ ತಾಣವಾಗಿತ್ತು. ಅವರು ಇಲ್ಲಿಗೆ ನಿಯಮಿತವಾಗಿ ಬೇಟೆಯಾಡಲು ಆಗಮಿಸುತ್ತಿದ್ದರು.

ಒಂದಾನೊಂದು ಕಾಲದಲ್ಲಿ ಇಲ್ಲಿ ಬ್ರಿಟೀಷರ ಅವಧಿಯಲ್ಲಿ ಉದಗಮಂಡಲಂ ಬೇಟೆಯೆಂಬ ಪ್ರಸಿದ್ಧ ಚಟುವಟಿಕೆ ನಡೆಯುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಮೇಲೆ ಭೇಟೆಯ ನಿಷೇಧ ಮಾಡಲಾಯಿತು. ನಂತರದ ಅವಧಿಯಲ್ಲಿ ಇದು ಒಂದು ಪ್ರಸಿದ್ಧ ವಿಹಾರ ತಾಣವಾಗಿ ರೂಪುಗೊಂಡಿತು. ಈ ಪ್ರದೇಶಕ್ಕೆ ಭೇಟಿಕೊಡುವ ಪ್ರತಿಯೊಬ್ಬ ಪ್ರವಾಸಿಗನು ಇಲ್ಲಿಗೆ ಭೇಟಿಕೊಡದೆ ಹೋಗಲಾರ. ಇದರ ಜೊತೆಗೆ ಇಲ್ಲಿ ಜಿಮ್ಖಾನ ಕ್ಲಬ್, ಗಾಲ್ಫ್ ಕ್ಲಬ್ ಮತ್ತು ಸರ್ಕಾರಿ ಕುರು ಫಾರಂ ಸಹ ಇದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri