Search
  • Follow NativePlanet
Share
ಮುಖಪುಟ » ಸ್ಥಳಗಳು » ಊಟಿ » ಆಕರ್ಷಣೆಗಳು » ಅವಲಾನ್‍ಶ್/ಅವಲಾಂಚೆ ಕೆರೆ

ಅವಲಾನ್‍ಶ್/ಅವಲಾಂಚೆ ಕೆರೆ, ಊಟಿ

4

ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅವಲಾಂಚೆ(ಹಿಮಪಾತ) ಕೆರೆಯು ಊಟಿಯಿಂದ 28 ಕಿ.ಮೀ ದೂರದಲ್ಲಿದೆ. ಈ ಕೆರೆಗೆ ಈ ಹೆಸರು ಬರಲು ಕಾರಣ 19 ನೇ ಶತಮಾನದಲ್ಲಿ ಈ ಸ್ಥಳದಲ್ಲಿ ಮಂಜಿನ ಗಡ್ಡೆಗಳು ಸುರಿದ ಅನುಭವವಾಗಿತ್ತಂತೆ.

ಈ ಕೆರೆಯು ಪ್ರವಾಸಿಗರ ಮತ್ತು ಸ್ಥಳೀಯರ ವಲಯದಲ್ಲಿ ಭಾರೀ ಪ್ರಸಿದ್ಧಿಯನ್ನು ಪಡೆದಿದೆ. ಕೆರೆಯ ಸುತ್ತಮುತ್ತಲ ಪ್ರದೇಶವು ಮಂತ್ರ ಮುಗ್ಧಗೊಳಿಸುವಂತಿದೆ. ಈ ಕೆರೆಯ ಸುತ್ತಲು ಮುಗಿಲೆತ್ತರಕ್ಕೆ ನಿಂತಿರುವ ಬೆಟ್ಟಗಳಲ್ಲಿ ಮ್ಯಾಗ್ನೋಲಿಯ, ರೋಡೊಡೆಂಡ್ರನ್ಸ್ ಮತ್ತು ಆರ್ಕಿಡ್‍ಗಳಿದ್ದು, ನೋಡುಗರನ್ನು ಸಮ್ಮೋಹಿತಗೊಳಿಸುತ್ತವೆ. ಹಲವಾರು ಪ್ರವಾಸಿಗರು ಈ ಕೆರೆಯ ಸುತ್ತ ಮುತ್ತ ಏಕಾಂತದಲ್ಲಿ ವಿಹರಿಸುತ್ತಿರುವುದನ್ನು ನೋಡುವುದೇ ಒಂದು ಚಂದ.

ಇನ್ನು ಕೆಲವರು ಕೆರೆಯಲ್ಲಿ ಮೀನು ಹಿಡಿಯುತ್ತ ಕಾಲ ಕಳೆಯುತ್ತಾರೆ. ಈ ಕೆರೆಯಲ್ಲಿ ಸಿಹಿ ನೀರಿನ ಟ್ರೌಟ್ ಮೀನುಗಳು ಅಧಿಕವಾಗಿವೆ.  ಮೀನು ಹಿಡಿಯಲು ಬಯಸುವವರಿಗಾಗಿ ಮೀನು ಹಿಡಿಯುವ ಗಾಳ, ಕೋಲು, ಮೀನಿಗೆ ಹಾಕುವ ಎರೆಗಳನ್ನು ಮತ್ತು ಇನ್ನಿತರ ಉಪಕರಣಗಳನ್ನು ಒದಗಿಸುವ ಅಂಗಡಿಯನ್ನು ಸಹ ಇಲ್ಲಿ ತೆರೆಯಲಾಗಿದೆ.

ಸಾಹಸ ಮನೋಭಾವವನ್ನು ಹೊಂದಿರುವ ಪ್ರವಾಸಿಗರು ಈ ಕೆರೆಯ ಬಳಿಯಲ್ಲಿ ಶಿಬಿರವನ್ನು ಹಾಕಬಹುದು. ಇಲ್ಲಿಯೇ ಶಿಬಿರವನ್ನು ಹಾಕಿ ಹಾಯಾಗಿ ಕಾಲ ಕಳೆಯಬಹುದು. ಕೆಲವರು ಇಲ್ಲಿ ಚಾರಣವನ್ನು ಮಾಡಿದರೆ, ಇನ್ನೂ ಕೆಲವರು ರೋಮಾಂಚಕಾರಿ ಎನಿಸುವ ರಾಫ್ಟಿಂಗ್‍ನಲ್ಲಿ ಪಾಲ್ಗೊಳ್ಳುತ್ತಾರೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri