Search
  • Follow NativePlanet
Share
» »ಭಾರತದ ಕೆಲವು ಜನಪ್ರಿಯ ಖಾದ್ಯಗಳು ಈ ದೇಶಗಳಲ್ಲಿ ನಿಷೇಧ, ಇದ್ರಲ್ಲಿ ನಿಮ್ಮ ಫೇವರಿಟ್‌ ಇದೆಯಾ ಚೆಕ್‌ ಮಾಡಿ…

ಭಾರತದ ಕೆಲವು ಜನಪ್ರಿಯ ಖಾದ್ಯಗಳು ಈ ದೇಶಗಳಲ್ಲಿ ನಿಷೇಧ, ಇದ್ರಲ್ಲಿ ನಿಮ್ಮ ಫೇವರಿಟ್‌ ಇದೆಯಾ ಚೆಕ್‌ ಮಾಡಿ…

ಭಾರತವು ವೈವಿಧ್ಯತೆಯ ದೇಶ. ಭೂಗೋಳದ ಆಧಾರದ ಮೇಲೆ ದೇಶದಲ್ಲಿ ವಿವಿಧ ಧರ್ಮಗಳು, ಸಮುದಾಯಗಳು ಮತ್ತು ಸಂಸ್ಕೃತಿಗಳ ಜನರು ವಾಸಿಸುತ್ತಿದ್ದಾರೆ. ಪ್ರತಿಯೊಬ್ಬರ ಜೀವನಶೈಲಿ ವಿಭಿನ್ನವಾಗಿರುವುದರ ಜೊತೆಗೆ ಅವರ ಆಹಾರ ಪದ್ಧತಿಯಲ್ಲೂ ವ್ಯತ್ಯಾಸವಿದೆ. ಭಾರತದಲ್ಲಿ, ಉತ್ತರದಿಂದ ದಕ್ಷಿಣಕ್ಕೆ ವಿವಿಧ ಸ್ಥಳೀಯ ಆಹಾರಗಳ ರುಚಿ ನೋಡಬಹುದು. ಅಷ್ಟೇ ಏಕೆ ವಿದೇಶಿ ಆಹಾರದ ರುಚಿ ಕೂಡ ಇಲ್ಲಿ ಸುಲಭವಾಗಿ ಲಭ್ಯವಿದೆ.

ವಿದೇಶಿ ಭಕ್ಷ್ಯಗಳಾದ ಚೈನೀಸ್ ಅಥವಾ ಇಟಾಲಿಯನ್ ಆಹಾರವನ್ನು ಭಾರತೀಯರು ತಯಾರಿಸುತ್ತಾರೆ. ಆದರೆ ಭಾರತಕ್ಕೆ ಭೇಟಿ ನೀಡುವ ವಿದೇಶಿಗರು ಭಾರತೀಯ ಭಕ್ಷ್ಯಗಳ ರುಚಿಯನ್ನು ಇಷ್ಟಪಡುವುದಲ್ಲದೆ, ಹೊಗಳುತ್ತಾರೆ. ಆದರೆ ಕೆಲವು ಪ್ರಸಿದ್ಧ ಭಾರತೀಯ ಭಕ್ಷ್ಯಗಳನ್ನು ವಿದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೌದು, ನಮ್ಮಲ್ಲಿ ಪ್ರತಿದಿನ ಸೇವಿಸುವ ಅನೇಕ ಭಕ್ಷ್ಯಗಳನ್ನೇ ವಿದೇಶದಲ್ಲಿ ಬಳಕೆಗೆ ನಿಷೇಧಿಸಲಾಗಿದೆ. ಹಾಗಾದರೆ ವಿದೇಶಗಳಲ್ಲಿ ನಿಷೇಧಿತವಾದ ಭಾರತದ ಆ ಜನಪ್ರಿಯ ಭಕ್ಷ್ಯಗಳ ಬಗ್ಗೆ ತಿಳಿಯೋಣ ಬನ್ನಿ...

ಗಸಗಸೆ ಬೀಜ

ನಮ್ಮಲ್ಲಿ ಗಸಗಸೆ ಬೀಜಗಳಿಲ್ಲದೆ ಕೆಲವು ಸಿಹಿ ತಿಂಡಿಯಾಗಲಿ, ಮಾಂಸಹಾರಿ ಆಹಾರವಾಗಲಿ ಸಿದ್ಧವಾಗುವುದಿಲ್ಲ. ಗಸಗಸೆಯನ್ನು ಸೂಪರ್‌ಫುಡ್ ಎಂದೂ ಕರೆಯುತ್ತಾರೆ. ಇದನ್ನು ಸಿಹಿತಿಂಡಿಗಳು, ತರಕಾರಿ ಗ್ರೇವಿ, ರೊಟ್ಟಿ, ದಾಲ್ ಸೇರಿದಂತೆ ಎಲ್ಲಾ ರೀತಿಯ ಆಹಾರಗಳಲ್ಲಿ ಬಳಸಲಾಗುತ್ತದೆ. ಆದರೆ ಭಾರತದ ಈ ಸೂಪರ್‌ಫುಡ್ ಅನ್ನು ಸಿಂಗಾಪುರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕುವೈತ್‌ನಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಗಸಗಸೆ ಬೀಜಗಳು ಈ ದೇಶಗಳಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲ್ಪಟ್ಟಿರುವ ಅಫೀಮು ಸಸ್ಯದ ಆಲ್ಕಲಾಯ್ಡ್‌ಗಳನ್ನು ಕನಿಷ್ಠ ಪ್ರಮಾಣದಲ್ಲಿ ಹೊಂದಿರುತ್ತವೆ. ಅದಕ್ಕಾಗಿಯೇ ಇಲ್ಲಿ ನಿಷೇಧಿಸಲಾಗಿದೆ.

cheese

ಚೀಸ್

ಚೀಸ್ ಹೆಸರು ಕೇಳಿದರೆ ಪ್ರತಿಯೊಬ್ಬ ಭಾರತೀಯನ ಬಾಯಲ್ಲಿ ನೀರೂರುತ್ತದೆ. ಚೀಸ್ ಇಷ್ಟಪಡದ ಯಾವುದೇ ವ್ಯಕ್ತಿ ಇಲ್ಲ. ಇದು ಪ್ರತಿಯೊಬ್ಬ ಭಾರತೀಯರ ನೆಚ್ಚಿನ ಡೈರಿ ಉತ್ಪನ್ನವಾಗಿದೆ. ತರಕಾರಿಗಳ ಹೊರತಾಗಿ ಈಗ ಪ್ರತಿಯೊಂದು ಭಾರತೀಯ ಭಕ್ಷ್ಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಸಿಹಿತಿಂಡಿಗಳಿಂದ ಹಿಡಿದು ಪೋಹಾ, ದೋಸೆ, ಪಕೋಡಗಳನ್ನು ಚೀಸ್‌ ಹಾಕಿ ತಯಾರಿಸಲಾಗುತ್ತದೆ. ಆದರೆ ಜಗತ್ತಿನಲ್ಲಿ ಚೀಸ್ ಅನ್ನು ನಿಷೇಧಿಸಿದ ದೇಶಗಳೂ ಇವೆ. ನಾರ್ವೆ ಮತ್ತು ಅಮೆರಿಕಾದಲ್ಲಿ ಚೀಸ್ ಅನ್ನು ಭಾಗಶಃ ನಿಷೇಧಿಸಲಾಗಿದೆ.

ghee

ತುಪ್ಪ

ತುಪ್ಪಕ್ಕೆ ಆಯುರ್ವೇದದಲ್ಲಿ ವಿಶೇಷ ಸ್ಥಾನವಿದೆ. ಇದು ಭಾರತದಲ್ಲಿ ಹೆಚ್ಚಿನ ಜನರು ಸೇವಿಸುವ ಕೊಬ್ಬಿನ ಪದಾರ್ಥಗಳ ಪೈಕಿ ಒಂದಾಗಿದೆ. ಇದನ್ನು ಹಸು ಅಥವಾ ಎಮ್ಮೆ ಹಾಲಿನಿಂದ ತಯಾರಿಸಲಾಗುತ್ತದೆ. ತುಪ್ಪವು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದೆ, ಇದು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಲ್ಲಿ ಪ್ರಯೋಜನಕಾರಿಯಾಗಿದೆ. ಆದರೆ ಅಮೆರಿಕ ಸೇರಿದಂತೆ ಅನೇಕ ದೇಶಗಳು ತುಪ್ಪವನ್ನು ನಿಷೇಧಿಸಿದೆ. ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ತುಪ್ಪದ ಅಪಾಯವನ್ನು ಉಲ್ಲೇಖಿಸಿ ಅಮೆರಿಕ ಅದರ ಸೇವನೆಯನ್ನು ನಿಷೇಧಿಸಿದೆ.

ಜೆಲ್ಲಿ

ನೀವೆಲ್ಲರೂ ನಿಮ್ಮ ಬಾಲ್ಯದಲ್ಲಿ ಸಣ್ಣ ಪ್ಲಾಸ್ಟಿಕ್ ಕಪ್‌ಗಳಲ್ಲಿ ಸಿಗುವ ಜೆಲ್ಲಿಯನ್ನು ತಿಂದಿರಬೇಕು. ಇದು ಬಾಲ್ಯದ ನೆನಪುಗಳಲ್ಲಿ ಒಂದು. ಅನೇಕ ಮಕ್ಕಳ ಮೆಚ್ಚಿನ ತಿನಿಸಾಗಿರುವ ಈ ಜೆಲ್ಲಿಯನ್ನು ಆಸ್ಟ್ರೇಲಿಯಾದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ಮಕ್ಕಳನ್ನು ಆಕರ್ಷಿಸುವ ಈ ಕಪ್ ಜೆಲ್ಲಿಯಲ್ಲಿ ಹಾನಿಕಾರಕ ಅಂಶಗಳಿದ್ದು, ಇದರಿಂದ ಮಕ್ಕಳಲ್ಲಿ ಉಸಿರುಗಟ್ಟುವಿಕೆ ಸಮಸ್ಯೆ ಉಂಟಾಗಿದೆ, ಆದ್ದರಿಂದ ಇದನ್ನು ನಿಷೇಧಿಸಲಾಗಿದೆ ಎಂದು ಆಸ್ಟ್ರೇಲಿಯಾ ಹೇಳಿದೆ.

kechup1

ಕೆಚಪ್

ಕೆಚಪ್ ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿರುವ ಸಾಸ್ ಆಗಿದೆ. ಇದನ್ನು ಟೊಮೆಟೊ ಕೆಚಪ್ ಎಂದೂ ಕರೆಯುತ್ತಾರೆ. ಕೆಚಪ್‌ ಅನ್ನು ಮಸಾಲೆಯಾಗಿ ಮತ್ತು ಆಹಾರದಲ್ಲಿ ಒಂದು ಭಾಗವಾಗಿ ಬಳಸಲಾಗುತ್ತದೆ. ಭಾರತದಲ್ಲಿ, ಕೆಚಪ್ ಅನ್ನು ಬರ್ಗರ್ ಮತ್ತು ಫ್ರೆಂಚ್ ಫ್ರೈಗಳೊಂದಿಗೆ ತಿನ್ನಲಾಗುತ್ತದೆ. ಆದರೆ ಕೆಚಪ್‌ ಅನ್ನು ಫ್ರಾನ್ಸ್ ನಲ್ಲಿ ನಿಷೇಧಿಸಲಾಗಿದೆ. ಫ್ರಾನ್ಸ್ ಕೆಚಪ್ ಅನ್ನು ನಿಷೇಧಿಸಿತು. ಏಕೆಂದರೆ ಅವರು ತಮ್ಮ ದೇಶದಲ್ಲಿ ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಲು ಬಯಸಿದ್ದರು.

ಕಬಾಬ್

ಕಬಾಬ್‌ ಅಂದ್ರೆ ಭಾರತದಲ್ಲಿ ಚಿಕ್ಕ ಮಕ್ಕಳಿನಿಂದ ದೊಡ್ಡವರ ತನಕ ಇಷ್ಟಪಡುವ ಖಾದ್ಯ. ಅದರಲ್ಲೂ ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಕಬಾಬ್ ಅನ್ನು ದೇಶದಾದ್ಯಂತ ಹೆಚ್ಚು ಇಷ್ಟಪಟ್ಟು ತಿನ್ನಲಾಗುತ್ತದೆ. ಕಬಾಬ್ ಮುಖ್ಯವಾಗಿ ಮಾಂಸಾಹಾರಿ ಭಕ್ಷ್ಯವಾಗಿದೆ, ಇದನ್ನು ಫ್ರೈಡ್ ಮೀಟ್ ಕೇಕ್ ಎಂದೂ ಕರೆಯಲಾಗುತ್ತದೆ. ಇದನ್ನು ರುಮಾಲಿ ರೋಟಿಯೊಂದಿಗೆ ತಿನ್ನಲಾಗುತ್ತದೆ. ಆದರೆ ವೆನಿಸ್‌ ನಲ್ಲಿ ಕಬಾಬ್ ನಿಷೇಧಿಸಲಾಗಿದೆ. ನಗರದ ಸಂಪ್ರದಾಯ ಮತ್ತು ಶಿಸ್ತು ಕಾಪಾಡಲು ಅಲ್ಲಿನ ಸರ್ಕಾರ 2017ರಲ್ಲಿ ಕಬಾಬ್‌ ನಿಷೇಧಿಸಿತ್ತು. ‌

samosas

ಸಮೋಸ

ಭಾರತದ ಜನಪ್ರಿಯ ತಿಂಡಿಗಳಲ್ಲಿ ಸಮೋಸ ಕೂಡ ಒಂದು. ʼಮೋಟು ಪತ್ಲುʼನಂತಹ ಕಾರ್ಟೂನ್‌ ಸೀರಿಯಲ್‌ ನೋಡಿದರೆ ಸಮೋಸ ತಿಂದರೆ ಎಷ್ಟು ಶಕ್ತಿ ಬರುತ್ತದೆ ಎಂಬುದನ್ನು ತೋರಿಸಲಾಗಿದೆ. ದೇಶಾದ್ಯಂತ ಜನರಿಗೆ ಸಮೋಸ ಅಂದ್ರೆ ಬಹಳ ಪ್ರೀತಿ. ಇದು ಒಂದು ರೀತಿಯ ಕರಿದ ಅಥವಾ ಬೇಯಿಸಿದ ಸ್ಟಫ್ಡ್ ತಿಂಡಿ. ಸಮೋಸ ತಯಾರಿಸಲು ಗೋಧಿ ಅಥವಾ ಮೈದಾ ಹಿಟ್ಟನ್ನು ಚೆನ್ನಾಗಿ ಕಲಸಿ ನಾದಿಕೊಂಡು ಟಿಕ್ಕಾ ಅಥವಾ ತ್ರಿಕೋನ ಆಕಾರದಲ್ಲಿ ಮಡಿಚಿಕೊಳ್ಳಲಾಗುತ್ತದೆ. ಕೊನೆಯಲ್ಲಿ ಅದರಲ್ಲಿ ಸ್ಟಫ್‌ ಮಾಡುವುದಕ್ಕೆ ಆಲೂಗಡ್ಡೆ ಮತ್ತಿತರ ಮೇಲೋಗರವನ್ನು ತುಂಬಿ ಎಣ್ಣೆಯಲ್ಲಿ ಗರಿಗರಿಯಾಗುವವರೆಗೆ ಹುರಿಯಲಾಗುತ್ತದೆ. ಆದರೆ ನಿಮಗೆ ಗೊತ್ತಾ, ಅಲ್-ಶಬಾಬ್ ಗುಂಪು ಸೊಮಾಲಿಯಾದಲ್ಲಿ ಸಮೋಸವನ್ನು ನಿಷೇಧಿಸಿದೆ. ಇದಕ್ಕೆ ಕಾರಣ ಸಮೋಸಾದ ತ್ರಿಕೋನ ಆಕಾರವು ಕ್ರಿಶ್ಚಿಯನ್ ಧರ್ಮದೊಂದಿಗೆ ಸಂಬಂಧ ಹೊಂದಿದೆ.

ಚವನ್ ಪ್ರಾಶ್

ಭಾರತದಲ್ಲಿ ವ್ಯಾಪಕವಾಗಿ ಸೇವಿಸಲ್ಪಡುವ ಆಯುರ್ವೇದ ಉತ್ಪನ್ನವೆಂದರೆ ಅದು ಚವನ್ ಪ್ರಾಶ್. ಇದು ರೋಗನಿರೋಧಕ ಶಕ್ತಿ ಮತ್ತು ದೈಹಿಕ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಚವನ್ ಪ್ರಾಶ್ ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ಸಹಾಯಕವಾಗಿದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಭಾರತದಲ್ಲಿ ಮಕ್ಕಳು ಮತ್ತು ವೃದ್ಧರು ಸೇವಿಸುವ ಚವನ್ ಪ್ರಾಶ್ ಅನ್ನು ಕೆನಡಾದಲ್ಲಿ ನಿಷೇಧಿಸಲಾಗಿದೆ. 2005 ರಲ್ಲಿ, ಕೆನಡಾದ ಸರ್ಕಾರವು ಚವನ್ ಪ್ರಾಶ್ ಅನ್ನು ನಿಷೇಧಿಸಿತು. ಏಕೆಂದರೆ ಇದು ಹೆಚ್ಚಿನ ಪ್ರಮಾಣದ ಸೀಸ ಮತ್ತು ಪಾದರಸವನ್ನು ಹೊಂದಿದೆ ಎಂದು ಕಂಡುಬಂದಿದೆ.

More News

Read more about: india food ವಿದೇಶ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+