Ambani's Favourite Vacation Spots: ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಮತ್ತು ಭಾರತದ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಇದರಲ್ಲಿ ಭಾರತ ಮತ್ತು ವಿದೇಶಗಳ ನಾಯಕರು, ಕೈಗಾರಿಕೋದ್ಯಮಿಗಳು ಮತ್ತು ಸಿನಿ ಗಣ್ಯರು ಭಾಗವಹಿಸಿದ್ದರು. ಮದುವೆಯ ನಂತರ, ಅನಂತ್ ಮತ್ತು ರಾಧಿಕಾ ಅವರು ಹನಿಮೂನ್‌ಗೆ ಹೋಗುವ ಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ.

ಹಾಗೆ ನೋಡಿದರೆ ಅನಂತ್‌ಗೆ ವನ್ಯಜೀವಿಗಳು ಎಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಅನಂತ್ ಅಂಬಾನಿಯವರ ಕನಸಿನ ಪ್ರಾಜೆಕ್ಟ್ ವಂತಾರವನ್ನು ನಡೆಸುತ್ತಿರುವ ಜಾಮ್‌ನಗರದಲ್ಲಿ ಅವರ ವಿವಾಹ ಪೂರ್ವ ಸಮಾರಂಭ ನಡೆಯಿತು. ಅನಂತ್‌ಗೆ ಪ್ರಾಣಿಗಳ ಮೇಲಿರುವ ಪ್ರೀತಿ ಈ ವಂತಾರದಲ್ಲಿ ಕಾಣುತ್ತಿತ್ತು. ಇದಲ್ಲದೇ ಮದುವೆಯ ಸಂಭ್ರಮದಲ್ಲಿ ರಾಧಿಕಾ ಅವರ ಉಡುಗೆಯಲ್ಲೂ ಪ್ರಾಣಿಗಳ ಮೇಲಿನ ಪ್ರೀತಿ ಎದ್ದು ಕಾಣುತ್ತಿತ್ತು.
ಅಂಬಾನಿ ಅವರ ಇಡೀ ಕುಟುಂಬ ಪ್ರಕೃತಿಯನ್ನು ಪ್ರೀತಿಸುತ್ತದೆ. ಹಾಗಾಗಿಯೇ ಅಂಬಾನಿ ಕುಟುಂಬವು ರಜಾದಿನಗಳಲ್ಲಿ ದೇಶ ಮತ್ತು ವಿದೇಶದಲ್ಲಿರುವ ಅತ್ಯಂತ ಸುಂದರವಾದ ಪ್ರಾಕೃತಿಕ ಸ್ಥಳಗಳಿಗೆ ಹೋಗಲು ಇಷ್ಟಪಡುತ್ತದೆ. ಬನ್ನಿ ಹಾಗಾದರೆ ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಸೊಸೆ ಶ್ಲೋಕಾ ಅಂಬಾನಿ ಅವರ ನೆಚ್ಚಿನ ಸ್ಥಳಗಳನ್ನು ಯಾವುವು ಎಂದು ನೋಡೋಣ..

ಅನಂತ್ ಅಂಬಾನಿ ನೆಚ್ಚಿನ ಸ್ಥಳ
ಅನಂತ್ ಅಂಬಾನಿಯವರು ಬಾಲ್ಯದಲ್ಲಿ ಪ್ರಪಂಚದ ಜನಪ್ರಿಯ ವನ್ಯಜೀವಿ ಸ್ಥಳಗಳತ್ತ ತೆರಳಲು ಇಷ್ಟಪಡುತ್ತಿದ್ದರು. ವರದಿಗಳ ಪ್ರಕಾರ, ಅನಂತ್ ಅಂಬಾನಿ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ರಾಜಸ್ಥಾನದಲ್ಲಿರುವ ರಣಥಂಬೋರ್ ರಾಷ್ಟ್ರೀಯ ಉದ್ಯಾನವು ಬಂಗಾಳ ಹುಲಿಗಳಿಗೆ ಹೆಸರುವಾಸಿಯಾಗಿದೆ. ಈ ಉದ್ಯಾನವನವು ರಾಜಸ್ಥಾನದ ಸವಾಯಿ ಮಾಧೋಪುರ್ ನಗರದಿಂದ ಸುಮಾರು 13.5 ಕಿಲೋಮೀಟರ್ ದೂರದಲ್ಲಿದೆ. ಸರಿಸುಮಾರು 400 ಚದರ ಕಿಲೋಮೀಟರ್‌ಗಳಷ್ಟು ಹರಡಿರುವ ಈ ಉದ್ಯಾನವನವು ಹುಲಿಗಳ ಹೊರತಾಗಿ ಚಿರತೆಗಳು, ಸ್ಲಾಥ್ ಕರಡಿಗಳು, ಸಾಂಬಾರ್ ಜಿಂಕೆಗಳು ಮತ್ತು ವಿವಿಧ ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ.
ಅನಂತ್ ಅವರು ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದ ಜೊತೆಗೂ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ. ಕ್ರುಗರ್ ರಾಷ್ಟ್ರೀಯ ಉದ್ಯಾನವನವು 20,000 ಚದರ ಕಿಲೋಮೀಟರ್‌ಗಳಷ್ಟು ಹರಡಿದೆ. ಇಲ್ಲಿ ಸಿಂಹಗಳು, ಆನೆಗಳು, ಎಮ್ಮೆಗಳು, ಚಿರತೆಗಳು ಘೇಂಡಾಮೃಗಗಳು, ಜಿರಾಫೆಗಳು, ಜೀಬ್ರಾಗಳು, ಹಿಪ್ಪೋಗಳು ಮತ್ತು ಮೊಸಳೆಗಳಂತಹ ಇತರ ಜಾತಿಗಳ ಪ್ರಾಣಿಗಳಿವೆ. ಪ್ರವಾಸಿಗರು ಕಾಡು ಪ್ರಾಣಿಗಳನ್ನು ನೋಡಲು ಸಫಾರಿ ಅಥವಾ ಕಾಲ್ನಡಿಗೆಯಲ್ಲಿ ಹೋಗಲು ಅವಕಾಶವನ್ನು ಪಡೆಯುತ್ತಾರೆ.

ಆಕಾಶ್ ಅಂಬಾನಿಗೆ ಲಂಡನ್ ಇಷ್ಟ
ಮುಕೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ಲಂಡನ್‌ನಲ್ಲಿ ರಜಾದಿನಗಳನ್ನು ಕಳೆಯಲು ಇಷ್ಟಪಡುತ್ತಾರೆ. 2023 ರಲ್ಲಿ, ಮುಖೇಶ್ ಅಂಬಾನಿ ಮತ್ತು ಆಕಾಶ್ ಅಂಬಾನಿ ಲಂಡನ್‌ನ ಸ್ಟ್ರೀಟ್‌ನಲ್ಲಿ ಕಾಣಿಸಿಕೊಂಡಿದ್ದರು.
ಇಶಾ ಅಂಬಾನಿಗೆ ಇಟಲಿ ಫೇವರಿಟ್
ಅಂಬಾನಿ ಕುಟುಂಬದ ಮಗಳು ಇಶಾ ಅಂಬಾನಿಗೆ ಇಟಲಿಯ ಲೇಕ್ ಕೊಮೊ ಎಂದರೆ ತುಂಬಾ ಇಷ್ಟ. ಇಶಾ ಅಂಬಾನಿ ತಮ್ಮ ನಿಶ್ಚಿತಾರ್ಥಕ್ಕಾಗಿ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು. ಕೊಮೊ ಸರೋವರದ ಗೋಥಿಕ್ ವಾಸ್ತುಶಿಲ್ಪವು ಈ ಸ್ಥಳವನ್ನು ವಿಶೇಷವಾಗಿಸುತ್ತದೆ. ಇಲ್ಲಿನ ಕಟ್ಟಡಗಳು ಗೋಥಿಕ್ ಶೈಲಿಯನ್ನು ಪ್ರತಿಬಿಂಬಿಸುತ್ತದೆ.
ಶ್ಲೋಕಾ ಅಂಬಾನಿಗೆ ಸ್ವಿಟ್ಜರ್ಲೆಂಡ್ ನೆಚ್ಚಿನ ಪ್ಲೇಸ್
ಸ್ವಿಟ್ಜರ್ಲೆಂಡ್ ಆಕಾಶ್ ಅಂಬಾನಿ ಅವರ ಪತ್ನಿ ಶ್ಲೋಕಾ ಅವರ ನೆಚ್ಚಿನ ತಾಣವಾಗಿದೆ. ಚಳಿಗಾಲದಲ್ಲಿ ಇಲ್ಲಿ ಹಿಮದಿಂದ ಆವೃತವಾದ ನಗರದ ನೋಟವು ಸ್ವರ್ಗದಂತೆ ಕಾಣುತ್ತದೆ. ಅಂದಹಾಗೆ ಆಕಾಶ್ ಮತ್ತು ಶ್ಲೋಕಾ ಅವರ ವಿವಾಹ ಪೂರ್ವ ಸಂಭ್ರಮಾಚರಣೆ ಸೆಂಟ್ ಮೊರಿಟ್ಜ್‌ನಲ್ಲಿ ನಡೆಯಿತು.


Click it and Unblock the Notifications















