Search
  • Follow NativePlanet
Share
» »ಆಸ್ತಿ ಮಾರಿ ಬೆನ್ನ ಮೇಲೆ ವೃದ್ಧ ತಾಯಿ ಹೊತ್ತು ಚೀನಾ ಪ್ರವಾಸ ಮಾಡುತ್ತಿರುವ ಆಧುನಿಕ ಶ್ರವಣಕುಮಾರ

ಆಸ್ತಿ ಮಾರಿ ಬೆನ್ನ ಮೇಲೆ ವೃದ್ಧ ತಾಯಿ ಹೊತ್ತು ಚೀನಾ ಪ್ರವಾಸ ಮಾಡುತ್ತಿರುವ ಆಧುನಿಕ ಶ್ರವಣಕುಮಾರ

ಹಿಂದೆ ತ್ರೇತಾಯುಗದಲ್ಲಿದ್ದ ಶ್ರವಣ ಕುಮಾರನ ಕಥೆ ನೀವೆಲ್ಲ ಖಂಡಿತ ಕೇಳಿರುತ್ತೀರಿ. ಅವನ ತಂದೆ-ತಾಯಿ ಇಬ್ಬರೂ ಹುಟ್ಟು ಕುರುಡರು ಹಾಗೂ ವಯೋವೃದ್ಧರು. ಪುರಾಣ ಕತೆಗಳ ಪ್ರಕಾರ ಶ್ರವಣ ಕುಮಾರ ತನ್ನ ತಂದೆ-ತಾಯಿಗೆ ಮುಪ್ಪಿನಲ್ಲಿ ಜನಿಸಿದ ಮಗ. ಹಾಗಾಗಿ ಅವನು ಎಲ್ಲಿಯೂ ಹೋಗದೆ ತಂದೆತಾಯಿಯ ಸೇವೆ ಮಾಡಿಕೊಂಡು ಅವರ ಬಳಿಯೇ ಇರುತ್ತಿದ್ದ. ತನ್ನ ಹೆತ್ತವರನ್ನು ತುಂಬಾ ಪ್ರೀತಿಸುತ್ತಿದ್ದ. ತನ್ನ ತಂದೆ-ತಾಯಿಯ ಪ್ರತಿಯೊಂದು ಆಸೆಯನ್ನು ಈಡೇರಿಸುತ್ತಿದ್ದ ಶ್ರವಣ ಕುಮಾರನಿಗೆ, ಒಮ್ಮೆ "ತೀರ್ಥಯಾತ್ರೆ ಹೋಗಬೇಕು" ಎಂದು ತಂದೆ-ತಾಯಿ ಹಂಬಲ ವ್ಯಕ್ತಪಡಿಸಿದಾಗ ಶ್ರವಣ ಕುಮಾರ ಕಾವಡಿಯನ್ನು ತಯಾರಿಸಿ ಬುಟ್ಟಿಗಳಲ್ಲಿ ತಂದೆ-ತಾಯಿಯನ್ನು ಕೂರಿಸಿ ಅವರು ನೋಡಬೇಕೆಂದ ಸ್ಥಳಗಳಲ್ಲಿ ಕರೆದುಕೊಂಡು ಹೋದ.

ಬಹುತೇಕರಿಗೆ ಶ್ರವಣ ಕುಮಾರನ ಈ ಕಥೆ ಕೇಳಿದಾಗ "ನಮಗೂ ಇಂತಹ ಮಗನಿರಬಾರದಿತ್ತಾ"? ಎಂದು ಅನಿಸದೆ ಇರದು. ಆದರೆ ಚೀನಾದಲ್ಲಿ ಶ್ರವಣ ಕುಮಾರನ ತರಹದ ಪುತ್ರನೊಬ್ಬ ಇದ್ದಾನೆ. ಹೌದು, ಆತನು ಕೂಡ ತನ್ನ ತಾಯಿಗೋಸ್ಕರ ಜೀವನವನ್ನೇ ಮುಡುಪಾಗಿಟ್ಟಿದ್ದಾನೆ. ಅಷ್ಟೇ ಅಲ್ಲ, ತನ್ನ ತಾಯಿಯನ್ನು ಪುಟ್ಟ ಮಕ್ಕಳಂತೆ ಹೆಗಲ ಮೇಲೆ ಹೊತ್ತುಕೊಂಡು ಚೀನಾ ಪ್ರವಾಸ ಮಾಡುತ್ತಿರುವುದನ್ನು ಕಂಡು ಪ್ರತಿಯೊಬ್ಬರು ಪ್ರಶಂಸಿಸುತ್ತಿದ್ದಾರೆ.

ಅಪಘಾತದಲ್ಲಿ ಸೆರೆಬ್ರಲ್ ಪಾಲ್ಸಿಗೆ ತುತ್ತಾದ ತಾಯಿ

ತನ್ನ ತಾಯಿಯ ಜೊತೆ ಚೀನಾ ಪ್ರವಾಸ ಮಾಡುತ್ತಿರುವ ಯುವಕನ ಹೆಸರು ಕ್ಸಿಯಾವೊ ಮಾ. ಇವರಿಗೆ ಕೇವಲ ಎಂಟು ವರ್ಷ ವಯಸ್ಸಾಗಿತ್ತು. ಆಗ ಅವರ ಪೋಷಕರ ಕಾರು ಭೀಕರ ಅಪಘಾತಕ್ಕೀಡಾಯಿತು. ಕಾರು ಅಪಘಾತದಲ್ಲಿ ತಂದೆ ಸಾವನ್ನಪ್ಪಿದರೆ, ತಾಯಿ ನಡೆಯಲು ಸಾಧ್ಯವಾಗದ ಸ್ಥಿತಿ ತಲುಪಿದರು. ಆಗ ಕ್ಸಿಯಾವೊ ಮಾ ಹಾಗೂ ಅವರ ಅಕ್ಕ ತಾಯಿಯನ್ನು ನೋಡಿಕೊಳ್ಳಲು ಮುಂದಾದರು. ತಾಯಿ ಕಾರು ಅಪಘಾತದ ಪರಿಣಾಮವಾಗಿ ಸೆರೆಬ್ರಲ್ ಪಾಲ್ಸಿಗೆ ಒಳಗಾಗಿದ್ದರು. ಕ್ಸಿಯಾವೊ ಮಾ ಮೊದ ಮೊದಲು ಹತ್ತಿ ಕೀಳುವ ಹೊಲಗಳಲ್ಲಿ ಕೆಲಸ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅಪ್ರೆಂಟಿಸ್‌ ಆಗಿ ದುಡಿದರು. ಅನುಭವ, ಪರಿಣಿತಿ ಪಡೆದ ನಂತರ ಕ್ಸಿಯಾವೊ ಅವರು ಕ್ಸಿನ್‌ಜಿಯಾಂಗ್‌ನಲ್ಲಿ ತಮ್ಮದೇ ಆದ ರೆಸ್ಟೋರೆಂಟ್ ಅನ್ನು ತೆರೆದರು.

31-year-oldmancarriesmother2

ಉಳಿದಿರುವ ಸಮಯ ತಾಯಿ ಜೊತೆ...

ಕ್ಸಿಯಾವೊ ಮಾ ದುಡಿದ ಹೆಚ್ಚಿನ ಹಣವೆಲ್ಲವೂ ತಾಯಿಯ ಚೇತರಿಕೆಗೆ ಖರ್ಚಾಗುತ್ತಿತ್ತು. ಆದರೆ ಅವರ ಶ್ರಮವು ಫಲ ನೀಡಿತು. ಏಕೆಂದರೆ ತಾಯಿಯು ಕ್ರಮೇಣ ಹಾಸಿಗೆಯಿಂದ ಎದ್ದು ಗಾಲಿಕುರ್ಚಿಯ ಮೇಲೆ ಕುಳಿತು ಕೆಲವು ಸಣ್ಣ ಹೆಜ್ಜೆಗಳನ್ನು ಇಡಲು ಸಾಧ್ಯವಾಯಿತು. ಆದರೆ ಇದಾಗಿ ಕೆಲವು ವರ್ಷಗಳ ಹಿಂದೆ ಕ್ಸಿಯಾವೊ ಮಾ, ತನ್ನ ತಾಯಿಯ ಸೆರೆಬ್ರಲ್ ಪಾಲ್ಸಿ ಗುಣಪಡಿಸಲಾಗದು ಎಂದು ಅರಿತುಕೊಂಡರು. ಆದ್ದರಿಂದ ತಾಯಿಯೊಂದಿಗೆ ಉಳಿದಿರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿದರು.

ಬೆನ್ನಿನ ಮೇಲೆ ಹೊತ್ತು ಪ್ರಯಾಣ

ತನ್ನ ವ್ಯಾಪಾರದ ಮೇಲೆ ಕೇಂದ್ರೀಕರಿಸುವ ಬದಲು ಕ್ಸಿಯಾವೊ ಮಾ ತನ್ನ ಮನೆ ಮತ್ತು ಕಾರನ್ನು ಮಾರಾಟ ಮಾಡಲು ನಿರ್ಧರಿಸಿದರು. ಅವರು ತನ್ನ ತಾಯಿಯನ್ನು ಚೀನಾ ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಿದರು. ತಾಯಿಯ ಮನಸ್ಸು ಈಗ ಚಿಕ್ಕ ಮಗುವಿನಂತಿದೆ. ಆದ್ದರಿಂದ ಕ್ಸಿಯಾವೊ ಮಾ ಆಕೆಯೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಬಯಸಿದ್ದಾರೆ. ಸದ್ಯ ಕ್ಸಿಯಾವೊ ತನ್ನ ತಾಯಿಯನ್ನು ಬೆನ್ನಿನ ಮೇಲೆ ಹೊತ್ತು ಪ್ರಯಾಣ ಬೆಳೆಸಿದ್ದಾರೆ. ಅವರು ಟಿಯಾನ್‌ಶಾನ್ ಪರ್ವತಗಳು, ಟಿಯಾಂಚಿ ಸರೋವರ ಮತ್ತು ಕ್ಸಿನ್‌ಜಿಯಾಂಗ್‌ನ ಇತರ ತಾಣಗಳು, ಹಾಗೆಯೇ ಬೀಜಿಂಗ್‌ನ ಟಿಯಾನನ್‌ಮೆನ್ ಚೌಕ ಮತ್ತು ಮಹಾ ಗೋಡೆಗೆ ಭೇಟಿ ನೀಡಿದ್ದಾರೆ.

ವಯಸ್ಸಾಗಿರುವ ತಾಯಿಗೆ ಇನ್ನು ಮುಂದೆ ಮಾತನಾಡಲು ಸಾಧ್ಯವಾಗುವುದಿಲ್ಲ. ಆದರೆ ಇಬ್ಬರು ಪ್ರಯಾಣಿಸುವಾಗ ಆಕೆ ಯಾವಾಗಲೂ ನಗುತ್ತಿರುತ್ತಾಳೆ... "ನಾನು ಮಗುವಾಗಿದ್ದಾಗ ನನ್ನ ತಾಯಿ ನನ್ನನ್ನು ಹೊತ್ತು ತಿರುಗಾಡುತ್ತಿದ್ದಳು ಮತ್ತು ಈಗ ನಾನು ಅವಳನ್ನು ಹೊತ್ತಿದ್ದೇನೆ." ಎಂದು ಕ್ಸಿಯಾವೊ ಮಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿರುವುದನ್ನು ಕೇಳಿದರೆ ಕಲ್ಲು ಹೃದಯವು ಕರಗದೆ ಇರದು.

ಸೋಶಿಯಲ್‌ ಮೀಡಿಯಾದಲ್ಲಿ ಫೋಟೊಗಳು ವೈರಲ್‌

ಟಿಯಾನನ್ಮೆನ್ ಚೌಕದಲ್ಲಿ 31 ವರ್ಷದ ಯುವಕ ತನ್ನ ತಾಯಿಯನ್ನು ಬೆನ್ನಿನ ಮೇಲೆ ಹೊತ್ತೊಯ್ಯುತ್ತಿರುವ ಫೋಟೋಗಳು ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು. ದೇಶಾದ್ಯಂತ ಲಕ್ಷಾಂತರ ಜನರ ಪ್ರಶಂಸೆಗೆ ಪಾತ್ರವಾದ ಈ ವ್ಯಕ್ತಿಯೇ ಕ್ಸಿಯಾವೊ ಮಾ. ತನ್ನ ತಾಯಿಯನ್ನು ವರ್ಷಗಳಿಂದ ಹೊತ್ತುಕೊಂಡು ತಿರುಗುತ್ತಾ ಪ್ರಯಾಣವನ್ನು ದಾಖಲಿಸಿದ್ದಾರೆ. ಚೀನಾದ ಟಿಕ್‌ಟಾಕ್‌ನ ಆವೃತ್ತಿಯಾದ ಡೌಯಿನ್‌ನಲ್ಲಿ ಕ್ಸಿಯಾವೊ ಮಾ ಮತ್ತು ಅವರ ತಾಯಿಯ ಕಿರು ವಿಡಿಯೊಗಳನ್ನು ಪೋಸ್ಟ್‌ ಮಾಡಲಾಗಿದೆ. ಕ್ಸಿಯಾವೊ ಮಾ ಅವರ ತಾಯಿಯೊಂದಿಗೆ ಪ್ರಯಾಣಿಸಲು ಶಕ್ತರಾಗಲಿ ಎಂದು ಅವರ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+