ನಾಶಿಕ್‌ನಲ್ಲಿರುವ ಪಾಂಡವಲೇನಿ ಗುಹೆಗಳು ವಾಸ್ತುಶಿಲ್ಪ ಪ್ರಿಯರಿಗೆ ಇಷ್ಟವಾಗುತ್ತದೆ. ತ್ರಿವಶ್ಮಿ ಗುಡ್ಡದ ಬುಡದಲ್ಲಿರುವ ಈ ಗುಹೆಯು 20 ಶತಮಾನಗಳ ಹಿಂದಿನದು. ಇಲ್ಲಿನ ಗುಹೆಗಳ ಸಂಖ್ಯೆ ಒಟ್ಟು 24. ಇದನ್ನು ಜೈನ ರಾಜರು ನಿರ್ಮಿಸಿದ್ದರು ಎಂದು ನಂಬಲಾಗಿದೆ. ಅಂಬಿಕಾದೇವಿ, ವೀರ ಮನಿಭದ್ರಾಜಿ ಮತ್ತು ತೀರ್ಥಂಕರ ವೃಷಭದೇವ ಇಲ್ಲಿ ವಾಸವಾಗಿದ್ದರು.
ಜೈನ ಕಲಾಕೃತಿ ಮತ್ತು ಶಿಲಾಶಾಸನಗಳ ಹೊರತಾಗಿ ಇಲ್ಲಿ ಬುದ್ಧನ ಮೂರ್ತಿಯೂ ಕೂಡಾ ಇದೆ. ದೊಡ್ಡ ಕಲ್ಲಿನಲ್ಲಿ ನೀರಿನ ಟ್ಯಾಂಕನ್ನು ಕೆತ್ತಲಾಗಿದೆ. ಈ ಪ್ರದೇಶ ಸಂಪೂರ್ಣವಾಗಿ ಧಾರ್ಮಿಕವಾಗಿದ್ದು, ಇಲ್ಲಿ ಭಕ್ತರು ಮತ್ತು ಧಾರ್ಮಿಕರು ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ.


Click it and Unblock the Notifications