ನಾಣ್ಯ ಮ್ಯೂಸಿಯಂ ನಾಶಿಕ್‌ನ ಪ್ರಮುಖ ಪ್ರವಾಸಿ ತಾಣ. ಏಷ್ಯಾದಲ್ಲೇ ಮೊದಲ ನಾಣ್ಯ ಮ್ಯೂಸಿಯಂನ್ನು 1980 ರಲ್ಲಿ ಸ್ಥಾಪಿಸಲಾಯಿತು, ಇದನ್ನು ಸ್ಥಾಪನೆ ಮಾಡಿದ್ದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಸರ್ಚ್ ಇನ್ ನ್ಯುಮಿಸ್ಮಾಟಿಕ್ ಸ್ಟಡೀಸ್. ಇದು ಅಂಜ್ನೇರಿ ಗುಡ್ಡದ ಮೇಲೆ ಇದ್ದು, ಭವ್ಯ ಇತಿಹಾಸವನ್ನು ಸಾರುತ್ತಿದೆ. ನಾಣ್ಯಗಳ ಮೂಲಕ ಭಾರತದ ಇತಿಹಾಸವನ್ನು ಇದು ಸಾರುತ್ತಿದೆ.
ಮ್ಯೂಸಿಯಂನಲ್ಲಿರುವ ಕಲಾಕೃತಿಗಳು, ಚಿತ್ರಗಳು, ನೈಜ ಮತ್ತು ರೂಪಿಸಿದ ನಾಣ್ಯಗಳು ಭಾರತದ ನಾಣ್ಯ ವ್ಯವಸ್ಥೆಯನ್ನು ಸಾರಿ ಹೇಳುತ್ತಿವೆ. ನಾಣ್ಯವನ್ನು ಸಂಗ್ರಹಿಸುವ ಆಸಕ್ತಿಯಿದ್ದವರಿಗೆ ಕಾರ್ಯಾಗಾರವನ್ನು ಕೂಡಾ ಇಲ್ಲಿ ನಿರ್ವಹಿಸಲಾಗುತ್ತದೆ.


Click it and Unblock the Notifications