ನಲ್ಗೊಂಡ ನಗರದ ಸಮೀಪ ಕೊಲ್ಲಂಪಕು ಜೈನ ದೇವಾಲಯ ಇದೆ. ಇದು ಹೈದರಾಬಾದ್ ನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ.
ಆಂಧ್ರ ಪ್ರದೇಶದಲ್ಲಿ ಜೈನ್ ಧರ್ಮ ಅಷ್ಟೊಂದು ಇರದ ಕಾರಣ ಇಲ್ಲಿನ ಜೈನ ದೇವಾಲಯ ಸ್ವಲ್ಪ ಆಶ್ಚರ್ಯಕರವಾಗಿದೆ. ಇದು ಜೈನ ಧರ್ಮದ ಒಂದು ಹಳೆಯ ಕಟ್ಟಡವಾಗಿದೆ. ಆದರೆ ಹಲವಾರು ವರ್ಷಗಳಿಂದ ಮಾಡಿದ ನಿರ್ಲಕ್ಷದಿಂದಾಗಿ ಕಟ್ಟಡಗಳು ಶಿಥಿಲಗೊಂಡಿವೆ. ಆದರೆ ಆಂಧ್ರಪ್ರದೇಶ ಸರ್ಕಾರ ಮತ್ತು ಪುರಾತತ್ವ ಇಲಾಖೆಯ ಜಂಟಿ ಕೆಲಸಗಳಿಂದ ಈ ದೇವಾಲಯವನ್ನು ಮತ್ತೆ ನವೀಕರಿಸಲಾಗಿದೆ ಮತ್ತೀಗ ಇದು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಈ ಪುಣ್ಯ ಸ್ಥಳವನ್ನು ಮೊದಲಿನಂತೆಯೇ ಮಾಡಲು ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದೆ. ವೈಷ್ಣವರ ಪ್ರಭುತ್ವ ಇದ್ದ ನಾಡಲ್ಲಿ ಇಂತಹ ಜೈನ ದೇವಾಲಯ ಇರುವುದು ಒಂದು ವಿಸ್ಮಯವೇ ಸರಿ.