ನಾಲ್ದೇರಾದಿಂದ 18 ಕಿ.ಮೀ ದೂರದಲ್ಲಿರುವ ಚಬ್ಬಾ ಸುಂದರವಾದ ಹಳ್ಳಿ. ರಿವರ್ ರಾಫ್ಟಿಂಗ್ ಗೆ ಇಲ್ಲಿ ಅವಕಾಶವಿದ್ದು, ಸುಮಾರು 11 ಕಿ.ಮೀ ಉದ್ದದ ಒಂದು ರಿವರ್ ರಾಫ್ಟಿಂಗ್ ಕೋರ್ಸ್ ಇಲ್ಲಿಂದ ಆರಂಭವಾಗಿ ತತ್ತಪಾಣಿಯಲ್ಲಿ ಕೊನೆಗೊಳ್ಳುತ್ತದೆ. ಇನ್ನು ಕಾರ‍್ ಪಾರ್ಕಿಂಗ್‌ಗೆ ಅಂತಲೆ ಸಾಕಷ್ಟು ಸ್ಥಳಾವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ. ತರಬೇತಿ ಹೊಂದಿದ ರಾಫ್ಟಿಂಗ್ ಗೈಡ್‌ಗಳೂ ಇಲ್ಲಿದ್ದಾರೆ. ಮೇ ಮತ್ತು ಜೂನ್ ಹಾಗೂ ಸಪ್ಟೆಂಬರ‍್ ಮತ್ತು ಅಕ್ಟೋಬರಿನ ಅವಧಿಯಲ್ಲಿ ಇಲ್ಲಿ ರಾಫ್ಟಿಂಗ್ ಮಾಡಬಹುದು.


Click it and Unblock the Notifications