ಕಿಲ್ಬುರಿ, ನೈನಿತಾಲ್ ನಿಂದ 10 ಕಿಮೀ ದೂರದಲ್ಲಿರುವ ಒಂದು ಸುಂದರ ಪಿಕ್ನಿಕ್ ತಾಣವಾಗಿದೆ. ಇದು ಪ್ರವಾಸಿಗರಿಗೆ ರಜಾದಿನಗಳನ್ನು ಕಳೆಯಲು ಉತ್ತಮವಾದ ಸ್ಥಳವಾಗಿದ್ದು ಹಚ್ಚಹಸಿರಿನಿಂದ ಕೂಡಿದ ಓಕ್, ಪೈನ್ ಮತ್ತು ರೋಡೋಡೆನ್ಡ್ರೋನ್ (ಗುಲ್ಮ ಮರ) ಕಾಡುಗಳಲ್ಲಿ ವಿರಮಿಸಲು ಸೂಕ್ತವಾದ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ 2194 ಮೀಟರ್ ಎತ್ತರದಲ್ಲಿರುವ ಈ ತಾಣದಲ್ಲಿ ಪ್ರಯಾಣಿಕರು ಹಿಮದಿಂದ ಆವೃತವಾದ ಶಿಖರಗಳ ಸುಂದರವಾದ ನೀಳ ದೃಶ್ಯಗಳನ್ನು ಆನಂದಿಸಬಹುದು.
ಇದು 580 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳ ನೆಲೆಯಾಗಿದ್ದು, ಇದನ್ನು ವೀಕ್ಷಿಸುವ ಒಂದು ಪರಿಪೂರ್ಣ ಸ್ಥಳಾವಕಾಶ ಪ್ರವಾಸಿಗರಿಗೆ ಲಭ್ಯ! ಇಲ್ಲಿ ಕಂದು ಮರದ ಗೂಬೆಗಳು, ಕಾಲರ್ ಗ್ರಾಸ್ಬೀಕ್ಸ್, ಬಿಳಿಗಲ್ಲದ ನಗುವ ಹಾಡುಹಕ್ಕಿಗಳು ಮತ್ತು ಫೋರ್ಕ್ಟೈಲ್ ಮುಂತಾದ ಪಕ್ಷಿಗಳನ್ನು ಪ್ರವಾಸಿಗರು ಕಾಣಬಹುದು. ವೀಕ್ಷಕರು ಇಲ್ಲಿ ಅರಣ್ಯ ನಿವಾಸದ ವ್ಯವಸ್ಥೆಯನ್ನೂ ಪಡೆಯಬಹುದಾಗಿದೆ.