ಸಿಂಬಲ್ವಾರಾ ವನ್ಯಧಾಮವು ನಹಾನ್‌ನಲ್ಲಿರುವ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಇಲ್ಲಿ ಹಿಮಾಚಲ ಪ್ರದೇಶದ ಅಪೂರ್ವ ಪ್ರಾಣಿ ಪಕ್ಷಿಗಳಿವೆ. ಇದು ಸಾಲ್ ಅರಣ್ಯವಾಗಿದ್ದು, ವಲಸೆ ಪಕ್ಷಿಗಳಿಗೆ ಆವಾಸಸ್ಥಾನ. ಹೀಗಾಗಿ ಪ್ರವಾಸಿಗರು ಜಗತ್ತಿನ ಹಲವು ವಿಧದ ಪಕ್ಷಿಗಳನ್ನು ಇಲ್ಲಿ ನೋಡಬಹುದು. ಶಿವಾಲಿಕ್‌ನ ಅತ್ಯಂತ ಸುಂದರ ನೋಟ ಇದು. ದಟ್ಟ ಹಸಿರಿನ ಮಧ್ಯೆ ನೀರಿನ ಝರಿ ತುಳುಕಿಸುವ ಸೌಂದರ್ಯವನ್ನು ನೋಡಿ ಪ್ರವಾಸಿಗರು ಪುಳಕಿತಗೊಳ್ಳಬಹುದು.
ಸಾಂಬಾರ‍್, ಚಿತ್ತಾಲ್ ಮತ್ತು ಗೋರಲ್‌ನಂತಹ ಪ್ರಾಣಿಗಳು ಇಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಈ ಪ್ರಾಣಿಗಳನ್ನು ನೋಡಲು ಚಾರಣ ಹೋಗುವುದು ಒಳಿತು. ಇದರ ಜೊತೆಗೆ, ಸಿಂಬಲ್ವಾರಾ ವನ್ಯಧಾಮವು ಇನ್ನಿತರ ಹಲವು ಪ್ರಾಣಿಗಳಿಗೆ ವಿಶಿಷ್ಟವಾದದ್ದು. ಈ ವನ್ಯಧಾಮದ ಸಮೀಪದಲ್ಲೇ ಹರ್ಯಾಣಾ ಕಾಳೇಸರ‍್ ನ್ಯಾಷನಲ್ ಪಾರ್ಕ್ ಕೂಡಾ ಇದೆ. ಪ್ರಾಣಿಪಕ್ಷಿಗಳ ಸಮೂಹದ ಪರಿಚಯವನ್ನು ಪ್ರವಾಸಿಗರಿಗೆ ಸ್ಥೂಲವಾಗಿ ಈ ವನ್ಯಧಾಮವು ಮಾಡಿಕೊಡುತ್ತದೆ.


Click it and Unblock the Notifications