ಹಿಮಾಚಲ ಪ್ರದೇಶದ ನಹಾನ್‌ನಲ್ಲಿರುವ ಜಮು ಪೀಕ್ ಜನಪ್ರಿಯ ಪ್ರವಾಸಿ ತಾಣ. ರೇಣುಕಾ ಕೆರೆಯ ಸುಂದರ ದೃಶ್ಯವನ್ನು ಇಲ್ಲಿಂದ ನೋಡಬಹುದು. ಕೆರೆಯಿಂದ ಈ ಜಮು ಪೀಕ್ ಸುಮಾರು 8 ಕಿ.ಮೀ ದೂರದಲ್ಲಿದೆ. ಐತಿಹ್ಯಗಳ ಪ್ರಕಾರ, ಸಪ್ತರ್ಷಿಗಳಲ್ಲಿ ಒಬ್ಬರಾದ ಋಷಿಮುನಿ ಜಮದಗ್ನಿ ಇಲ್ಲಿರುವ ಪುಟ್ಟ ದೇವಾಲಯದಲ್ಲಿ ಧ್ಯಾನಿಸುತ್ತಿದ್ದರು. ಧಾರ್ಮಿಕವಾಗಿ ಇವರ ಪುತ್ರರಾದ ಪರಶುರಾಮರು ವಿಷ್ಣುವಿನ ಅವತಾರವಾಗಿದ್ದಾರೆ.
ಈ ಪರ್ವತವನ್ನು ಹತ್ತಲು ಪ್ರವಾಸಿಗರಿಗೆ ಸಣ್ಣ ದಾರಿಯೊಂದಿದೆಯಷ್ಟೇ. ಸಮುದ್ರ ಮಟ್ಟದಿಂದ 932 ಮೀಟರ‍್ ಎತ್ತರದಲ್ಲಿರುವ ಈ ಪ್ರದೇಶವು ಚಾರಣಿಗೆರಿಗೆ ಉತ್ತಮ ಅವಕಾಶ ಒದಗಿಸುತ್ತದೆ. ಈ ಪ್ರದೇಶಕ್ಕೆ ಭೇಟಿ ನೀಡಲು ಡಿಸೆಂಬರಿನಿಂದ ಮಾರ್ಚ್ ಅವಧಿ ಸೂಕ್ತ. ವಾತಾವರಣವು ಪ್ರಶಾಂತ ಮತ್ತು ಹಿತವಾಗಿರುತ್ತದೆ.


Click it and Unblock the Notifications