ಪೌಂಟಾ ಸಾಹಿಬ್ ರಸ್ತೆಯಲ್ಲಿರುವ ಪ್ರಮುಖ ಪ್ರವಾಸಿ ತಾಣ ಧೌಲಾ ಕುವಾ. ಈ ಸ್ಥಳವು ಸಿಟ್ರಸ್ ಸಸ್ಯಗಳು ಮತ್ತು ಮಾವಿನ ಗಿಡಗಳಿಗೆ ಜನಪ್ರಿಯವಾಗಿದೆ. ಹಣ್ಣು ಸಂಸ್ಕರಣಾ ಘಟಕವೂ ಇಲ್ಲಿದೆ. ಅತ್ಯುತ್ತಮ ಗುಣಮಟ್ಟದ ಹಣ್ಣಿನಿಂದ, ಸಂಸ್ಕರಿಸಿದ ಜ್ಯೂಸ್, ಉಪ್ಪಿನಕಾಯಿ ಮತ್ತು ಜಾಮ್ ಅನ್ನು ತಯಾರಿಸಲಾಗುತ್ತದೆ.
ಇದರ ಜೊತೆಗೇ ಹಿಮಾಚಲ ಪ್ರದೇಶ ಕೃಷಿ ವಿಶ್ವವಿದ್ಯಾಲಯವು ಧೌಲಾ ಕುವಾನಲ್ಲಿ ಸಂಶೋಧನಾ ಕೇಂದ್ರವನ್ನೂ ಹೊಂದಿದೆ. ಆಯಾ ಕಾಲದ ಹಣ್ಣು ಬೆಳೆಯ ಬಗ್ಗೆ ಸಂಶೋಧನೆಯನ್ನು ಇಲ್ಲಿ ನಡೆಸಲಾಗುತ್ತದೆ. ರುಲಾಮ್ ಖಾದಿರ‍್ ರೋಹಿಲ್ಲಾರ ಜೊತೆಗಿನ ಯುದ್ಧದಲ್ಲಿ ರಾಜ ಜಗತ್ ಸಿಂಗ್ ಗೆದ್ದ ತರುವಾಯ ಅವರು ಕಟಸನ್ ದೇವಿ ದೇವಸ್ಥಾನವನ್ನು ಇಲ್ಲಿ ನಿರ್ಮಿಸಿದ್ದಾರೆ.


Click it and Unblock the Notifications