ನಾಗ್ಪುರದಲ್ಲಿನ ಪ್ರಮುಖ ಆಕರ್ಷಕ ಪ್ರದೇಶಗಳಲ್ಲಿ ಅಂಬಜಾರಿ ಕೆರೆಯೂ ಒಂದು. ಸುಮಾರು 15 ಚದರ ಕಿಲೋಮೀಟರು ಪ್ರದೇಶದ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕೆರೆಯು ಉತ್ತಮ ರಜಾಕಾಲದ ತಾಣವಾಗಿದೆ.
ಈ ಕೆರೆಯ ದಂಡೆಯ ಮೇಲೆ ಸುಂದರವಾದ ಗಾರ್ಡನ್ ಮತ್ತು ಸಂಗೀತ ಕಾರಂಜಿ ಕೂಡಾ ಇದೆ. ಮಕ್ಕಳ ಆಟಕ್ಕೆ ಇದು ಅತ್ಯುತ್ತಮ ತಾಣವಾಗಿದೆ. ಇಲ್ಲಿ ಸಣ್ಣ ರೈಲು, ಬೋಟಿಂಗ್ ವ್ಯವಸ್ಥೆ, ಈಜುಗಾರಿಕೆ ಮತ್ತಿತರ ಹಲವು ಆಟಗಳಿಗೆ ಅವಕಾಶವಿದೆ.
ಬೆಳಗಿನ ವಾಯುವಿಹಾರಕ್ಕಾಗಿ ಟ್ರ್ಯಾಕ್‌ಗಳನ್ನು ಕೂಡಾ ಉದ್ಯಾನವನದಲ್ಲಿ ನಿರ್ಮಿಸಲಾಗಿದೆ.


Click it and Unblock the Notifications