ನಾಗೂರ್ ನಲ್ಲಿರುವ ಅತ್ಯಂತ ಪವಿತ್ರ ಮಸೀದಿಗಳಲ್ಲಿ ಥೀರು ಪಲ್ಲಿ ಮಸೀದಿ ಒಂದು. ತಮಿಳುನಾಡಿನ ಮಹಾನಗರ ಪಾಲಿಕೆ ನಗರವಾಗಿರುವ ನಾಗೂರ್ ಹಿಂದೂ ಮತ್ತು ಮುಸ್ಲಿಮರ ಸೌಹಾರ್ದತೆಗೆ ರಾಜ್ಯದಲ್ಲೇ ಹೆಸರನ್ನು ಗಳಿಸಿದೆ. ಮುಸ್ಲಿಮರು ಪ್ರತೀ ದಿನ ಪ್ರಾರ್ಥನೆ ಸಲ್ಲಿಸಲು ಇಲ್ಲಿ ಆಗಮಿಸುತ್ತಾರೆ. ಸ್ಥಳೀಯರು ಮಸೀದಿಯೊಂದಿಗೆ ಅವಿನಾಭಾವ ಹೊಂದಿದ್ದು, ಮಸೀದಿ ಆಡಳಿತದವರು ಸಾಮಾನ್ಯ ಜನರೊಂದಿಗೆ ಬೆರೆತು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಮಸೀದಿಯೊಳಗೆ ಭೇಟಿ ನೀಡಿದ ಪ್ರತಿಯೊಬ್ಬರಿಗೂ ಅಲ್ಲಿನ ವಾತಾವರಣದಿಂದ ತುಂಬಾ ಶಾಂತಿಯ ಭಾವನೆಯುಂಟಾಗುತ್ತದೆ. ತುಂಬಾ ಪವಿತ್ರವೆಂದು ಪರಿಗಣಿಸಲಾಗಿರುವ ಮಸೀದಿಯೊಳಗೆ ಪ್ರಾರ್ಥನೆ ಮಾಡಿದರೆ ಅವರ ಇಷ್ಟಾರ್ಥಗಳು ಈಡೇರುತ್ತದೆ ಎಂದು ನಂಬಲಾಗಿದೆ. ಪರಿಸರದಲ್ಲಿ ಸುಂದರವಾಗಿ ಕಾಣುವಂತಾಗಲು ಮಸೀದಿಯನ್ನು ತುಂಬಾ ಶೃಂಗರಿಸಲಾಗಿದೆ.


Click it and Unblock the Notifications