ಭಾರತದ ದಕ್ಷಿಣ ರಾಜ್ಯಗಳಲ್ಲಿ ಒಂದಾಗಿರುವ ತಮಿಳುನಾಡಿನಲ್ಲಿರುವ ಜಗತ್ಪ್ರಸಿದ್ಧ ದರ್ಗಾವೇ ನಾಗೂರ್ ದರ್ಗಾ. ರಾಷ್ಟ್ರ ಮತ್ತು ವಿಶ್ವದಾದ್ಯಂತ ಈ ದರ್ಗಾವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದ್ದು, ಹರ್ಜತ್ ಸಯಿದ್ ಶಾಹುಲ್ ಹಮೀದ್ ಖಾದಿರ್ ಈ ದರ್ಗಾದ ಹಿಂದಿರುವ ಪ್ರಮುಖ ಶಕ್ತಿ. ಈ ದರ್ಗಾವು ತಾಂಜಾವೂರಿನಿಂದ ಕೇವಲ ಎಂಟು ಕಿ.ಮೀ. ದೂರದಲ್ಲಿದೆ. ಆದರೆ ಚೆನ್ನೈ ಮೂಲಕ ಬರುವವರು ಐದು ಗಂಟೆಗಳ ಕಾಲ ಪ್ರಯಾಣಿಸಬೇಕಾಗಿದೆ. ಸುಮಾರು 500 ವರ್ಷ ಹಳೆಯದಾಗಿರುವ ಈ ದರ್ಗಾವು ದಕ್ಷಿಣದ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣವಾಗಿದೆ. ದರ್ಗಾ ಸುತ್ತಲಿನ ಹಲವಾರು ದೇವಸ್ಥಾನಗಳನ್ನು ಹೋಲುತ್ತದೆ. ಸುಮಾರು ಐದು ಎಕ್ರೆ ಜಾಗದಲ್ಲಿರುವ ದರ್ಗಾವು 16ನೇ ಶತಮಾನದ ಸಂತ ನಾಗೂರ್ ಅಂದವರ್ ಗೆ ಸಮರ್ಪಿತವಾಗಿದೆ. ನಾಗೂರ್ ಅಂದವರ್ ವಿಶ್ವದಾದ್ಯಂತ ಖಾದಿರ್ ಅಲಿ ಎಂದೇ ಪರಿಚಿತರು.


Click it and Unblock the Notifications