Search
  • Follow NativePlanet
Share
ಮುಖಪುಟ » ಸ್ಥಳಗಳು » ಮುನ್ನಾರ್ » ಆಕರ್ಷಣೆಗಳು » ನಡುಕಣಿ

ನಡುಕಣಿ, ಮುನ್ನಾರ್

1

 ನಡುಕಣಿಯು ಮುನ್ನಾರಿನಿಂದ 25 ಕಿ.ಮೀ ದೂರದಲ್ಲಿದ್ದು, ಇದು ಒಂದು ಬೆಟ್ಟದ ಮೇಲಿರುವ ನಯನ ಮನೋಹರವಾದ ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 3000 ಅಡಿಗಳಷ್ಟು ಎತ್ತರದಲ್ಲಿ ನೆಲೆಗೊಂಡಿದೆ. ಈ ತಾಣವು ನೋಡುಗರನ್ನು ಮೂಕವಿಸ್ಮಿತಗೊಳಿಸುವಂತಹ ಪರ್ವತ ಶಿಖರಗಳನ್ನು, ಭೋರ್ಗರೆದು ಹರಿಯುವ ಝರಿಗಳನ್ನು, ಹಸಿರಿನ ವನಸಿರಿಯನ್ನು, ಹುಲ್ಲುಗಾವಲುಗಳನ್ನು ಮತ್ತು ವಿಸ್ತಾರವಾಗಿ ಹರಡಿಕೊಂಡಿರುವ ಗದ್ದೆಗಳ ದೃಶ್ಯಗಳನ್ನು ನೋಡಲು ಬಲು ಪ್ರಸಿದ್ಧಿಯಾಗಿದೆ.

ನಡುಕಣಿಯು ಪಕ್ಷಿ ವೀಕ್ಷಕರಿಗೆ ಮತ್ತು ಪ್ರಾಣಿ ಆಸಕ್ತರಿಗೆ ಅದ್ಭುತವಾದ ಸ್ಥಳವಾಗಿದೆ. ಈ ಸ್ಥಳವು ತನ್ನಲ್ಲಿರುವ ವಿಪುಲವಾದ ಪ್ರಾಣಿ ಸಂಪತ್ತಿಗೆ ಹೆಸರುವಾಸಿಯಾಗಿದೆ. ಮಂಗಟ್ಟೆ ಹಕ್ಕಿಗಳು, ಕಾಡು ಮೊಲಗಳೂ, ಚುಕ್ಕಿಗಳಿರುವ ಸಂಬಾರ್ ಮತ್ತು ಕಾಡು ಮೈನಗಳಂತಹ ವೈವಿಧ್ಯಮಯ ಜೀವಸಂಕುಲಗಳನ್ನು ಇಲ್ಲಿ ಕಾಣಬಹುದು. ಒಂದೆಡೆ ಮುವಟ್ಟುಪುಳ ನದಿ ಮತ್ತು ಇನ್ನೊಂದೆಡೆ ಬೆಟ್ಟಗಳ ಸಾಲನ್ನು ಹೊಂದಿರುವ ನಡುಕಣಿಯು ಕೌಟುಂಬಿಕ ವಿಹಾರಗಳಿಗೆ ಮತ್ತು ಮಧುಚಂದ್ರಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ.

ನಡುಕಣಿಯ ಮತ್ತೊಂದು ಆಕರ್ಷಣೆಯೆಂದರೆ ಮೂಲಮಟ್ಟಂ ಎಂಬ ಭೂತಳದ ವಿದ್ಯುತ್ ಕೇಂದ್ರ. ಸಾಲಾಗಿ ನಿಂತಿರುವ ಬೆಟ್ಟಗಳ ಶ್ರೇಣಿ ಮತ್ತು ದಟ್ಟಕಾಡುಗಳು ಈ ಸ್ಥಳವನ್ನು ಚಾರಣ ಯೋಗ್ಯ ಸ್ಥಳವನ್ನಾಗಿ ಮಾಡಿವೆ. ನಡುಕಣಿಯು ಇಡುಕ್ಕಿ ವನ್ಯಧಾಮದ ಗಡಿಗೆ ಹೊಂದಿಕೊಂಡಂತೆ ಇರುವುದರಿಂದಾಗಿ ಇಲ್ಲಿ ಪ್ರಾಣಿ ಮತ್ತು ಸಸ್ಯಸಂಕುಲದ ಅದ್ಭುತ ವೈವಿಧ್ಯಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed