ಗೊಯೆಂಕ ಶಿವಾಲಯವು ಶಿವನ ದೇವಾಲಯಗಳಲೆಲ್ಲ ಹೆಸರುವಾಸಿಯಾದದ್ದು. ಇದೊಂದು ಪುರಾತನ ಹಿಂದೂ ಯಾತ್ರಾಸ್ಥಳ. ಈ ದೇವಾಲಯವನ್ನು ದೊಡ್ಡ ನೀರಿನ ಕೊಳದ ನಡುವೆ ಕಟ್ಟಲಾಗಿದೆ. ಇದರಲ್ಲಿ ದೊಡ್ಡ ದೊಡ್ಡ ಮೀನುಗಳನ್ನು ಕಾಣಬಹುದು. ಅವುಗಳು ಆಟವಾಡುತ್ತಿರುವುದನ್ನು ನೋಡುವುದೇ ಚೆಂದ. ಇದರ ಸುತ್ತಲೂ ಹಸಿರು ತುಂಬಿದ ಸುಂದರ ಉದ್ಯಾನವನಗಳಿವೆ. ಶಿವನ ಹಬ್ಬಗಳಂದು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ.


Click it and Unblock the Notifications