ನತುವಖಾನ್ ಎನ್ನುವುದು ಒಂದು ಸುಂದರವಾದ ಗುಡ್ಡಗಾಡು ಹಳ್ಳಿಯಾಗಿದೆ. ಇದು ಸಮುದ್ರ ಮಟ್ಟದಿಂದ 1940 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಇದು ಮುಕ್ತೇಶ್ವರದದಿಂದ 14 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ನತುವಖಾನ್ ಎಂಬ ಹೆಸರು ಇಲ್ಲಿ ಜೀವಿಸಿದ್ದ ಪ್ರಸಿದ್ಧ ಮುಸ್ಲಿಂ ವ್ಯಕ್ತಿಯೊಬ್ಬರಿಂದ ಈ ಊರಿಗೆ ಇಡಲಾಗಿದೆ. ಈ ಹಳ್ಳಿಯು ಹಲವಾರು ಸಣ್ಣ ಪ್ರಾಂತ್ಯಗಳಾಗಿ ವಿಭಾಗಿಸಲ್ಪಟ್ಟಿದೆ. ತಲ್ಲಟಂಡ, ನವಡ, ಮಲ್ಲಟಂಡ, ಗಾಂವ್, ಕಫಲ್‍ಧಾರಿ, ಕನಲ, ಝೊಪ್ರೊ, ಬನೊಲ, ಬುಂಗ, ಬಗೀಛ, ಲಮಾಖಾನ್ ಮತ್ತು ತಪುಕ್ ಎಂಬುದು ಇವುಗಳ ಹೆಸರುಗಳಾಗಿವೆ.
ಪ್ರವಾಸಿಗರು ಇಲ್ಲಿ ಹಿಮಾಲಯದ ಪರ್ವತ ಶ್ರೇಣಿಗಳ ಭವ್ಯನೋಟವನ್ನು ನೋಡಬಹುದು. ಓಕ್, ಪೈನ್, ಬರ್ಚ್ ಮತ್ತು ಕಪಃಲ್ ಮರಗಳು ಈ ಪ್ರದೇಶದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಪ್ರವಾಸಿಗರು ಇಲ್ಲಿನ ಪಾರಂಪರಿಕ ಕಾಟೇಜ್‍ನಲ್ಲಿ ವಾಸ್ತವ್ಯ ಹೂಡಬಹುದು. ಈ ಸುಂದರವಾದ ಹಳೆಯ ಕಾಟೇಜ್‍ನ್ನು ಬಾಬ್ಸ್ ಕಾಟೇಜ್ ಎಂದು ಕರೆಯಲಾಗುತ್ತದೆ. ಚಾರಣ ಮತ್ತು ಪರಿಸರದ ನಡಿಗೆಗಳು ಇಲ್ಲಿ ಪ್ರವಾಸಿಗರು ಕೈಗೊಳ್ಳುವ ಪ್ರಮುಖ ಚಟುವಟಿಕೆಗಳಾಗಿವೆ.


Click it and Unblock the Notifications