Search
  • Follow NativePlanet
Share
ಮುಖಪುಟ » ಸ್ಥಳಗಳು » ಮೊರಾದಾಬಾದ್ » ಆಕರ್ಷಣೆಗಳು » ರಾಜಾ ಗ್ರಂಥಾಲಯ ರಾಂಪುರ

ರಾಜಾ ಗ್ರಂಥಾಲಯ ರಾಂಪುರ, ಮೊರಾದಾಬಾದ್

1

ರಾಜಾ ಗ್ರಂಥಾಲಯ ಉತ್ತರ ಪ್ರದೇಶದ ರಾಂಪುರದಲ್ಲಿದೆ. ಇದನ್ನು 1774 ರಲ್ಲಿ ನವಾಬ್ ಫೈಜುಲ್ಲಾ ಖಾನ್ ನಿರ್ಮಿಸಿದ. ಅವನು ತನ್ನಲ್ಲಿದ್ದ ಮತ್ತು ತನ್ನ ಪೂರ್ವಿಕರ ಎಲ್ಲಾ ಪುಸ್ತಕಗಳನ್ನು ಮತ್ತು ಜೊತೆಗೆ ನವಾಬಾ ತೋಷಕಾನಾವನ್ನು ಇಲ್ಲಿ ಇರಿಸಿದ್ದನು.  

ಇದು ಇಂಡೋ ಇಸ್ಲಾಮರ ಸಂಸ್ಕೃತಿಯನ್ನು ಬಿಂಬಿಸುವ ಒಂದು ಭಂಡಾರವಾಗಿದೆ. ರಾಂಪುರ ಬ್ರಿಟಿಷರ ಕಾಲದಲ್ಲಿ ರಾಜ್ಯವಾಗಿದ್ದರಿಂದ ಶ್ರೀಮಂತ ನವಾಬರು ಮತ್ತು ರಾಜರು ಗ್ರಂಥಾಲಯದ ಉನ್ನತಿಗೆ ಗಣನೀಯ ಕೊಡುಗೆಯನ್ನು ನೀಡಿದ್ದರು.

ಗ್ರಂಥಾಲಯ ಶ್ರೀಮಂತವಾದ ಸಂಗ್ರಹಗಳಲ್ಲಿ ತುಂಬಾ ವಿಧವಿಧವಾದ ಮತ್ತು ಅತ್ಯಮೂಲ್ಯವಾದ ಪುಸ್ತಕಗಳ ಭಂಡಾರವಿದೆ. ಚರಿತ್ರೆಯ ಸ್ಮಾರಕಗಳು, ಕೈಬರಹಗಳು, ಮೊಘಲರ ಪೈಟಿಂಗ್ ಗಳು, ಅಪರೂಪದ ಪರ್ಷಿಯನ್ ಮತ್ತು ಅರಬ್ ಭಾಷೆಯಲ್ಲಿರುವ ಸಚಿತ್ರಗಳು, ಇಸ್ಲಾಂರ ಕಾಲಿಗ್ರಾಫಿ, ಖಗೋಳ ಶಾಸ್ತ್ರದ ಸಾಧನಗಳನ್ನು ಗ್ರಂಥಾಲಯ ಹೊಂದಿದೆ.

ಈ ಗ್ರಂಥಾಲಯವು ಹೇರಳವಾದ ಅಪರೂಪದ ಹಿಂದಿ, ಸಂಸ್ಕೃತ, ಉರ್ದು, ತಮಿಳು, ಟರ್ಕಿಷ್ ಮತ್ತು ವಾಸ್ತು ಬರಹಗಳನ್ನು ಹೊಂದಿದ ಸಾಹಿತ್ಯವನ್ನು ಹೊಂದಿದೆ. ಇದರ ಉನ್ನತವಾದ ಕೀರ್ತಿ ಏನಂದರೆ ಇಲ್ಲಿ ಮೂಲ ಕುರಾನಿನ ಭಾಷಾನುವಾದ ಪ್ರತಿಕೃತಿಯನ್ನು ಹೊಂದಿದೆ. ಇಲ್ಲಿ ಸುಮಾರು ಮೂವತ್ತು ಸಾವಿರ ಪುಸ್ತಕಗಳು ಮತ್ತು ಬೇರೆ ಬೇರೆ ಭಾಷೆಯ ಪತ್ರಿಕೆಗಳನ್ನು ಹೊಂದಿದೆ. ಈಗ ಈ ಗ್ರಂಥಾಲಯವು ಭಾರತ ಸರಕಾರದ ಅಧೀನದಲ್ಲಿದೆ.

One Way
Return
From (Departure City)
To (Destination City)
Depart On
12 Sep,Sat
Return On
13 Sep,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Sep,Sat
Check Out
13 Sep,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Sep,Sat
Return On
13 Sep,Sun