ಮೊಕೊಕ್ಚೊಂಗ್ ನಾಗಾಲ್ಯಾಂಡಿನ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿರುವುದಕ್ಕೆ ಕಾರಣ ಇಲ್ಲಿನ ಏಓ ಪಂಗಡದ ಜನ. ಇದು ಏಓಗಳ ಮೂಲಸ್ಥಾನವಾಗಿರುವುದರಿಂದ ಅವರಿಗೆ ಸಂಬಂಧಿಸಿದ ಹಲವು ಕುತೂಹಲಕಾರಿ ವಸ್ತುಗಳನ್ನು ಇಲ್ಲಿ ಕಾಣಬಹುದು. ಏಓಗಳ ಶತಮಾನಗಳ ಬದುಕಿನ ಮಾದರಿಗಳನ್ನು ಇಲ್ಲಿ ಕಾಣಬಹುದು. ಇದು ಮೊಕೊಕ್ಚೊಂಗ್ ಜಿಲ್ಲೆಯ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ ಕೂಡ ಹೌದು. ಕತ್ತಿಗಳು, ಪದಕಗಳು, ಸಾಂಪ್ರದಾಯಿಕ ಉಡುಗೆತೊಡುಗೆಗಳಾದ ನಾಗಾಶಾಲುಗಳು, ಸಾಂಪ್ರದಾಯಿಕ ಆಭರಣಗಳನ್ನು ಇಲ್ಲಿ ಕಾಣಬಹುದು. ಪ್ರವಾಸಿಗರ ಇಲ್ಲಿ ಭೇಟಿ ನೀಡಿದರೆ ಏಓ ಪಂಗಡದವರ ವಿಶಿಷ್ಟತೆ ಏನೆಂದು ಮನಗಾಣಬಹುದು. ಏಓಗಳ ಬಗೆಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬಹುದು.


Click it and Unblock the Notifications