ಮೀರತ್ ನಲ್ಲಿರುವ ಸೇಂಟ್ ಜಾನ್ಸ್ ಚರ್ಚ್ ಉತ್ತರ ಭಾರತದ ಅತ್ಯಂತ ಹಳೆಯ ಚರ್ಚ್ ಎಂದು ಗುರುತಿಸಲಾಗಿದೆ. ಇದನ್ನು 19ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಬ್ರಿಟಿಷರ ಸೇನೆ ಇದನ್ನು ನಿರ್ಮಿಸಿದ್ದು, ಮೀರತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ರಿಟಿಷ್ ಯೋಧರ ಹಾಗೂ ಅಧಿಕಾರಿಗಳ ಆಧ್ಯಾತ್ಮಿಕ ಮತ್ತು ಧಾರ್ಮಿಕ ಅಗತ್ಯಗಳನ್ನು ಪೂರೈಸಲು ಇದನ್ನು ನಿರ್ಮಿಸಿದ್ದರು. ಇದು ಬ್ರಿಟಿಷ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ ಮತ್ತು ಆಕರ್ಷಣೀಯ ಹಾಗೂ ಅಂದವಾಗಿ ರೂಪುಗೊಳಿಸಿರುವ ಲಾನ್ ಇದೆ. ಇಲ್ಲಿಗೆ ಸ್ಥಳೀಯರು ಯಾವಾಗಲೂ ಭೇಟಿ ನೀಡುತ್ತಾರೆ. ಪ್ರತೀ ಭಾನುವಾರ ಇಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ.


Click it and Unblock the Notifications