ಶಹೀದ್ ಸ್ಮಾರಕ ಮೀರತ್ ನಲ್ಲಿ ನಿರ್ಮಿಸಲ್ಪಟ್ಟಿರುವ ಅತ್ಯಂತ ಪುರಾತನ ಯುದ್ಧ ಸ್ಮಾರಕ. ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿರುವ ಈ ಸ್ಮಾರಕವು ಸುಮಾರು 30 ಮೀಟರ್ ಎತ್ತರವಿದೆ ಮತ್ತು ಯುದ್ಧದಲ್ಲಿ ಹುತಾತ್ಮರಾದ ಭಾರತದ ಯೋಧರ ಸ್ಮರಣಿಗಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಇದು ಸ್ವಾತಂತ್ರ್ಯ ಸಂಗ್ರಾಮ ಮತ್ತು 1857ರ ಪ್ರಥಮ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಇದನ್ನು ನಿರ್ಮಿಸಲಾಗಿದೆ. ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ದಿನದಂದು ಹಲವಾರು ಮಂದಿ ಭಾರತೀಯರು ಇಲ್ಲಿಗೆ ಆಗಮಿಸಿ ದೇಶಕ್ಕಾಗಿ ಪ್ರಾಣ ಅರ್ಪಿಸಿರುವ ಯೋಧರಿಗೆ ಗೌರವ ಸೂಚಿಸುತ್ತಾರೆ.


Click it and Unblock the Notifications