ಗ್ವಾಲಿಯರ್ ಪ್ರದೇಶದ ಖಜಾಂಚಿಯಾಗಿದ್ದ ಸೇಠ್ ಗೋಕುಲದಾಸ್ ಪಾರೀಖ್ ಎಂಬಾತ 1814ನೇ ಇಸ್ವಿಯಲ್ಲಿ ಈ ದ್ವಾರಕಾಧೀಶ ಮಂದಿರವನ್ನು ಕಟ್ಟಿಸಿದ. ಈ ಮಂದಿರ ವಿಶ್ರಾಮ್ ಘಾಟ್‌ಗೆ ಬಹಳ ಸಮೀಪದಲ್ಲಿದೆ. ಶ್ರೀಕೃಷ್ಣನು ದ್ವಾರಕಾಧೀಶ ಅಥವಾ ದ್ವಾರಕಾದ ದೊರೆ ಎಂದು ಕರೆಯಲಾಗುವುದರಿಂದ ಈ ಮಂದಿರಕ್ಕೆ ಈ ಹೆಸರು ಬಂದಿದೆ. ಮಂದಿರದ ಎಲ್ಲಾ ಉಸ್ತುವಾರಿಯನ್ನು ವಲ್ಲಭಾಚಾರ್ಯ ಪಂಗಡ ತೆಗೆದುಕೊಂಡಿದೆ.
ಮಂದಿರದ ಮುಖ್ಯ ಆರಾಧನಾಗೃಹದಲ್ಲಿ ಶ್ರೀಕೃಷ್ಣ ಹಾಗು ರಾಧೆಯ ಪ್ರತಿಮೆಗಳಿವೆ. ಹಾಗೆಯೆ, ಇತರ ದೇವತೆಗಳ ಪ್ರತಿಮೆಗಳೂ ಸಹ ಇಲ್ಲಿ ಕಂಡುಬರುತ್ತವೆ. ಮಂದಿರದ ಒಳಾಂಗಣದ ಭಾಗ ಬೃಹತ್ತಾದ ಸುಂದರವಾದ ಕೆತ್ತನೆ, ಶಿಲ್ಪಕಲೆ ಹಾಗು ಚಿತ್ರಕಲೆಗೆ ಸಾಕ್ಷಿಯಾಗಿದೆ.
ಸಾವಿರಾರು ಭಕ್ತಾದಿಗಳು ಪ್ರತಿನಿತ್ಯವೂ ಇಲ್ಲಿಗೆ ಭೇಟಿ ಕೊಡುತ್ತಾರೆ. ಹಾಗೆಯೆ, ಹಬ್ಬಹರಿದಿನಗಳಲ್ಲಿ ವಿಶೇಷವಾಗಿ ಜನ್ಮಾಷ್ಟಮಿಯ ಸಂದರ್ಭದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಇಲ್ಲಿಗೆ ಭೇಟಿ ಕೊಡುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಅಲ್ಲಿನ ಜನ ವಾರ್ಷಿಕವಾಗಿ ಉಯ್ಯಾಲೆ ಹಬ್ಬವನ್ನು ಆಚರಿಸುತ್ತಾರೆ. ಇದನ್ನು ಸಾಧಾರಣವಾಗಿ ಮುಂಗಾರಿನ ಆರಂಭದ ಸೂಚಕವಾಗಿ ಶ್ರಾವಣ ಮಾಸದ ಕಡೆಯ ದಿನಗಳಲ್ಲಿ ಆಚರಿಸುತ್ತಾರೆ.


Click it and Unblock the Notifications