ಬುಧ್ಲಾಡಾ, ಭಟಿಂಡಾ-ದೆಹಲಿ ರೈಲು ಮಾರ್ಗದಲ್ಲಿದೆ. ಮಾನಸ ಪಟ್ಟಣದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ. ಬುಡಾ ಮತ್ತು ಲಾಡಾ ಎಂಬ ಇಬ್ಬರು ಖತ್ರಿ ಸಹೋದರರ ಹೆಸರನ್ನು ಈ ಹಳ್ಳಿಗೆ ಇಡಲಾಗಿದ್ದು ಬ್ರಿಟಿಷರು ವಶಪಡಿಸಿಕೊಳ್ಳುವ ಮೊದಲು ಕೈತಾಲ್ ರಾಜ್ಯದ ಒಂದು ಭಾಗವಾಗಿತ್ತು. ಇಲ್ಲಿಂದ 10 ಕಿ.ಮೀ. ದೂರದಲ್ಲಿರುವ ದೋದ್ರ ಎಂಬ ಸ್ಥಳದಲ್ಲಿ ಭ್ರಹ್ಮ್ ಬುಂಗಾ ಎಂಬ ಒಂದು ಗಮನಾರ್ಹ ಗುರುದ್ವಾರವಿದೆ. ಆಧ್ಯಾತ್ಮಿಕ ವರ್ಧನೆಯ ಸಲುವಾಗಿ ಜನರು ಹತ್ತಿರ ಮತ್ತು ದೂರದಿಂದ ಮೂರು ’ಸಮಾಗಮ’ಗಳನ್ನು ನಡೆಸುತ್ತಾರೆ. ಭಟಿಂಡಾ ಇಲ್ಲಿಗೆ ಸುಮಾರು 80 ಕಿ.ಮೀ. ದೂರದಲ್ಲಿದೆ.