ಹಿಮಾಚಲ ಪ್ರದೇಶದ ಮಂಡಿ-ಪಠಾನ್‌ಕೋಟ್ ಹೆದ್ದಾರಿಯಲ್ಲಿದೆ ತ್ರಿಲೋಕನಾಥ ದೇವಾಲಯ. ಮಂಡಿಯ ಅತ್ಯಂತ ಪುರಾತನ ಮಂದಿರಗಳಲ್ಲಿ ಇದೂ ಒಂದು. ಅಜ್ಬೀರ್ ಸೇನ್ ಅರಸನ ಪತ್ನಿ ರಾಣಿ ಸುಲ್ತಾನಾ ದೇವಿ 1520 ರಲ್ಲಿ ಈ ದೇವಾಲಯ ನಿರ್ಮಿಸಿದರು. ಈ ದೇವಾಲಯ ಹಿಂದೂ ದೇವರಾದ ಶಿವನಿಗೆ ಮೀಸಲಾಗಿದೆ. ಇಲ್ಲಿ ಮೂರು ಮುಖದ ಶಿವನ ವಿಗ್ರಹ ಗಮನ ಸೆಳೆಯುತ್ತದೆ. ಈ ದೇವಾಲಯದಲ್ಲಿ ಇನ್ನೂ ಅನೇಕ ಹಿಂದೂ ದೇವರುಗಳು ನೆಲೆಸಿದ್ದಾರೆ. ಅವುಗಳಲ್ಲಿ ನಾರದ ಹಾಗೂ ಶಾರದ ಪ್ರಮುಖರು. ಇನ್ನೂ ಅನೇಕ ದೇವಾನುದೇವತೆಗಳ ವಿಗ್ರಹ ಇಲ್ಲಿದೆ.


Click it and Unblock the Notifications