ಮಂಡಿ, ಶಾಪಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿ ಇದಕ್ಕೆ ಹೇರಳ ಅವಕಾಶ ಇದೆ. ಆಕರ್ಷಕ ಹಾಗೂ ಎಥ್ನಿಕ್ ಕರಕುಶಲ ವಸ್ತುವನ್ನು ಕೊಳ್ಳಲು, ಬೆಳ್ಳಿ ಆಭರಣ ಹಾಗೂ ಕಲ್ಲಿನ ಕೆತ್ತನೆಗಳನ್ನು ಕೊಳ್ಳಲು ಇದು ಉತ್ತಮ ಸ್ಥಳ.
ಮಂಡಿಯಲ್ಲಿ ಸಾಕಷ್ಟು ಟಿಬೇಟಿಯನ್ ಮಳಿಗೆಗಳು ಇವೆ. ಇಲ್ಲಿ ಸಾಂಪ್ರದಾಯಿಕ ಟಿಬೇಟಿಯನ್ ವಸ್ತುಗಳು ಸಿಗುತ್ತವೆ. ಪಹಾರಿ ಮರದ ಕೆಲಸ, ಶೀಶಂ ಮರ ಹಾಗೂ ಇತರೆ ಹಿಂದೂ ದೇವಾನುದೇವತೆಗಳ ಮೂರ್ತಿ ಸೇರಿದಂತೆ ಹಲವು ವಸ್ತುಗಳು ಇಲ್ಲಿ ಸಿಗುತ್ತವೆ. ಹಿಂದಿನ ದಿನಗಳಲ್ಲಿ ಇದನ್ನು ಟಿಬೇಟ್ ಹೆಬ್ಬಾಗಿಲು ಎಂದು ಕರೆಯಲಾಗುತ್ತಿತ್ತು. ಮಂಡಿಯಲ್ಲಿ ವ್ಯಾಪಾರಿಗಳು ಶತಮಾನಗಳಿಂದ ನೆಲೆಸಿದ್ದಾರೆ.


Click it and Unblock the Notifications