ಮನಾಲಿಯ ಹೃದಯ ಭಾಗದಲ್ಲಿ ನಿರ್ಮಾಣಗೊಂಡ ರಸ್ತೆ 'ಮಾಲ್ ರಸ್ತೆ'. ಇದು ಮನಾಲಿಯ ಜೀವನಾಡಿ. ಅತ್ಯಂತ ಆಕರ್ಷಕ ಹಾಗೂ ಜನಪ್ರಿಯ ತಾಣ. ಕೇಂದ್ರ ಮಾರುಕಟ್ಟೆ ಪ್ರದೇಶ ಇದಾಗಿದೆ. ಸಾಕಷ್ಟು ಸಂಖ್ಯೆಯ ಪ್ರವಾಸಿಗರನ್ನು ಇದು ಆಕರ್ಷಿಸುತ್ತದೆ. ರಸ್ತೆಯ ಇಕ್ಕೆಲದಲ್ಲೂ ಸಾಕಷ್ಟು ಅಂಗಡಿಗಳು ಇವೆ. ಇಲ್ಲಿ ಪ್ರವಾಸಿಗರು ತಮಗಿಷ್ಟವಾಗುವ ವಸ್ತುಗಳನ್ನು ಕೊಳ್ಳಬಹುದು. ಇಲ್ಲಿ ಪ್ರಸಿದ್ಧ ಕುಲ್ಲು ಚಿಪ್ಸ್, ಶಾಲು, ಉಲ್ಲನ್ ಉತ್ಪನ್ನಗಳು ಸಿಗುತ್ತವೆ. ಈ ಮಾರ್ಗವು ಇದಲ್ಲದೆ ಹೇರಳ ಸಂಖ್ಯೆಯ ಆಹಾರ ಕೇಂದ್ರ, ರೆಸ್ಟೊರೆಂಟ್, ಊಟದ ಮನೆ ಹಾಗೂ ಇತರೆ ವಸ್ತುವನ್ನು ಮಾರುವ ಮಳಿಗೆಗಳನ್ನು ಒಳಗೊಂಡಿದೆ.


Click it and Unblock the Notifications