ನರ್ಮದಾ ಘಾಟ್ ಅನ್ನು ಕ್ರಿ. ಶ ಹದಿನೆಂಟನೇ ಶತಮಾನದಲ್ಲಿ ಅಂದಿನ ಹೋಳ್ಕರ ರಾಜ್ಯದ ಮಹಾರಾಣಿಯಾಗಿದ್ದ ಅಹಲ್ಯಾಬಾಯಿ ಹೋಳ್ಕರಳು ನಿರ್ಮಿಸಿದಳು. ಭಾರತದ ಎಲ್ಲ ಪವಿತ್ರ ನದಿಗಳಲ್ಲಿ ನರ್ಮದ ನದಿಯು ಅತಿ ಪ್ರಮುಖವಾದದ್ದು ಎಂಬ ನಂಬಿಕೆ ಇದೆ. ಗಂಗಾ ನದಿಗೆ ತಾನು ಆಶುದ್ಧಳಾಗಿದ್ದೇನೆ ಎಂದು ಎನಿಸಿದಾಗ, ಅದು ಕಪ್ಪು ಆಕಳ ರೂಪವನ್ನು ಹೊಂದಿ ರಾತ್ರಿಯ ಸಮಯದಲ್ಲಿ ನರ್ಮದಾ ನದಿಗೆ ಬಂದು ಸ್ನಾನ ಮಾಡಿ ಶುದ್ಧಳಾಗುತ್ತಾಳೆ ಎಂಬ ನಂಬಿಕೆ ಇದೆ.
ನರ್ಮದಾ ಘಾಟ್ ಯಾವಾಗಲೂ ಭಕ್ತರಿಂದ ತುಂಬಿರುತ್ತದೆ. ಭಕ್ತರು ಪವಿತ್ರ ಸ್ನಾನವನ್ನು ಮಾಡುವ ಉದ್ದೇಶದಿಂದ ಈ ಘಾಟಿಗೆ ಭೇಟಿ ನೀಡುತ್ತಿರುತ್ತಾರೆ. ಈ ಘಾಟ್‍ನಿಂದ ನದಿಯ ದೃಶ್ಯವನ್ನು ನೋಡಿದರೆ ಉಸಿರು ಕಟ್ಟುವಂತಹ ಅನುಭವವಾಗುತ್ತದೆ. ಈ ನದಿಯು ಮಧ್ಯಪ್ರದೇಶದ ಬಹುತೇಕ ಎಲ್ಲ ಪ್ರದೇಶಗಳಲ್ಲಿಯೂ ಹರಿಯುತ್ತದೆ. ಹೀಗಾಗಿ ಈ ನದಿಯು ಮಧ್ಯಪ್ರದೇಶ ಜನರ ಹೃದಯದಲ್ಲಿ ಬಹು ಪ್ರಮುಖವಾದ ,ಬೇರ್ಪಡಿಸಲಾಗದ ಸ್ವತಃ ವಿಶಿಷ್ಟ ಸ್ನಾನವನ್ನು ಹೊಂದಿದೆ.
ನರ್ಮದಾ ಘಾಟ್ ಅನಾದಿ ಕಾಲದಿಂದಲೂ ಮಹೇಶ್ವರದ ಒಂದು ಪವಿತ್ರ ಭಾಗವಾಗಿದೆ. ನರ್ಮದಾ ನದಿಯಲ್ಲಿ ದಿನವೂ ಸಾವಿರಾರು ಜನರು ಭಕ್ತಿ ಪರವಶತೆಯಿಂದ ಪವಿತ್ರ ಸ್ನಾನಮಾಡುವುದು ಭಕ್ತಿ ಮತ್ತು ತ್ಯಾಗದ ಪ್ರತೀಕವಾಗಿದೆ. ಇದನ್ನು ಕಂಡು ಪ್ರವಾಸಿಗರು ನಿಜಕ್ಕೂ ಮೂಕವಿಸ್ಮಿತರಾಗುತ್ತಾರೆ.


Click it and Unblock the Notifications