Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಸಾತ್ಖಂದ

ಸಾತ್ಖಂದ, ಲಖನೌ

1

ಅವಧ್‍ನ ನವಾಬ್ ನಾಸಿರ್- ಉದ್- ದೌಲಾನು ಮೂಲತಃ ಇದನ್ನು ಒಂಬತ್ತು ಅಂತಸ್ತಿನ ಕಟ್ಟಡ- ನೌಖಂದ- ವಾಗಿ ನಿರ್ಮಾಣ ಮಾಡಬೇಕು ಎಂದು ಬಯಸಿದನಂತೆ. ಅದು ಬ್ಯಾಬಿಲೋನಿನ ಗೋಪುರದಂತೆ ಅಥವಾ ಪೀಸಾದ ವಾಲು ಗೋಪುರದಂತೆ ಪ್ರಪಂಚದ ಎಂಟನೆಯ ಅದ್ಭುತವಾಗಿ ನಿಲ್ಲ ಬೇಕು ಎಂಬುದು ಅವನ ಬಯಕೆಯಾಗಿತ್ತು. ಆದರೆ ಇದನ್ನು ಅವನ ಉತ್ತರಾಧಿಕಾರಿಯಾದ ನವಾಬ್ ಮಹಮ್ಮದ್ ಅಲಿ ಶಾನು ಆರಂಭಿಸಿದನು. ಈತನು ಇದನ್ನು ಏಳು ಅಂತಸ್ತಿನ ಕಟ್ಟಡವನ್ನಾಗಿ ನಿರ್ಮಿಸಲು ಆರಂಭಿಸಿದನು. ಈತನು 1840ರಲ್ಲಿ ನಿಧನವಾಗುವ ವೇಳೆಗೆ ನಾಲ್ಕು ಅಂತಸ್ತನ್ನು ಪೂರ್ಣಗೊಳಿಸಿದ್ದನು.

ಮತ್ತೊಂದು ಆಲೋಚನೆಯ ಪ್ರಕಾರ ನವಾಬನು ಇದನ್ನು ವೀಕ್ಷಣಾ ಗೋಪುರವಾಗಿ ಬಳಸಲು ಯೋಚಿಸಿದ್ದನು. ಇದನ್ನು ಪೂರ್ಣಗೊಳಿಸಿದ್ದಾದಲ್ಲಿ, ನವಾಬನು ಸಂಪೂರ್ಣ ನಗರದ ನೋಟವನ್ನು ಇಲ್ಲಿಂದ ಕಾಣಬಹುದಾಗಿತ್ತು. ಆದರೆ ನವಾಬನ ನಿಧನಾನಂತರ ಇದು ಶಿಥಿಲಾವಸ್ಥೆಗೆ ತಳ್ಳಲ್ಪಟ್ಟಿತು. ಅಳಿದುಳಿದಿರುವ ಅವಶೇಷಗಳೇ ಇದರ ಭವ್ಯತೆಯನ್ನು ಸಾರಿ ಸಾರಿ ಹೇಳುತ್ತಿವೆ.

ಸಾತ್ಖಂದವು ಫ್ರೆಂಚ್ ಮತ್ತು ಇಟಾಲಿಯನ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಇದು ಹುಸ್ಸೇನ್ನಬಾದ್ ಇಮಾಮ್‍ಬರಗೆ ಸಮೀಪದಲ್ಲಿ ನೆಲೆಗೊಂಡಿದೆ. ಮಧ್ಯಕಾಲೀನ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡವು ಇಂದಿಗು ತನ್ನ ಮೋಹಕತೆಯನ್ನು ಉಳಿಸಿಕೊಂಡಿದೆ. ಇದನ್ನು ಆಗ ಉತ್ತರ ಪ್ರದೇಶದ ರಾಜ್ಯಪಾಲನಾಗಿದ್ದ ಸರ್ ಜಾರ್ಜ್ ಕೂಪರ್ ರವರಿಗೆ ಗೌರವ ಸಲ್ಲಿಸುವ ಉದ್ದೇಶಕ್ಕಾಗಿ ಸಹ ನಿರ್ಮಾಣ ಮಾಡಲಾಯಿತು ಎಂದು ಕಾರಣ ನೀಡುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed