ರುಮಿ ದರ್ವಾಜಾವನ್ನು ತುರ್ಕಿಶ್ ಗೇಟ್ ಎಂದೂ ಕರೆಯಲಾಗುತ್ತದೆ. 13ನೇ ಶತಮಾನದ ಮುಸ್ಲಿಂ ಸೂಫಿ ಸಂತ ಜಲಾಲ್ ಅದ್-ದಿನ್ ಮುಹಮ್ಮದ್ ರುಮಿ ಅವರ ಹೆಸರನ್ನು ಈ ಗೇಟ್ ಗೆ ಇಡಲಾಗಿದೆ. ಆರು ಅಡಿ ಎತ್ತರದ ಈ ಗೇಟನ್ನು ನವಾಬ್ ಅಸಫ್ ಉದ್ ದೌಲ್ಹಾ 1784ರಲ್ಲಿ ನಿರ್ಮಿಸಿದ್ದ. ಅವಧ್ ಶೈಲಿಯ ವಾಸ್ತುಶಿಲ್ಪಕ್ಕೆ ಈ ಗೇಟ್ ಭವ್ಯ ಉದಾಹರಣೆಯಾಗಿದೆ ಮತ್ತು ಲಖನೌ ನಗರಕ್ಕೆ ಇದು ಮಹಾದ್ವಾರವಾಗಿದೆ.
ರಾತ್ರಿ ಸಾಗಾಣಿಕೆಗೆ ಬೃಹತಾಕಾರದ ದ್ವೀಪವೊಂದು ಅವಧ್ ನವಾಬರ ಕಾಲದಲ್ಲೇ ಗೇಟ್ ನ ಮೇಲ್ಗಡೆ ಅಳವಡಿಸಲಾಗಿತ್ತು. ಮಹಾದ್ವಾರದಲ್ಲಿ ಕಮಾನಿನ ಮೂಲಕ ರಚಿತವಾಗಿರುವ ಸುಂದರ ಮೊಗ್ಗಿನ ಆಕಾರದ ಚಿಲುಮೆಗಳಿಂದ ಸುರಿಯುವ ನೀರು ಇದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
1858ರಲ್ಲಿ ಲಖನೌಗೆ ದಾಳಿ ಮಾಡಿದ ಬ್ರಿಟಿಷ್ ಸೇನೆಯ ಬಗ್ಗೆ ವರದಿ ಮಾಡಿದ್ದ ನ್ಯೂಯಾರ್ಕ್ ಟೈಮ್ಸ್ ನ ವರದಿಗಾರ ರಸೆಲ್ ಅವರಿಗೆ ಗೌರವ ಸೂಚಿಸಲಾಗಿದೆ. ರುಮಿ ದರ್ವಾಜಾದಿಂದ ಛತ್ತರ್ ಮಂಜಿಲ್ ತನಕದ ಪ್ಯಾಸೇಜ್ ತಾನು ಹಿಂದೆಂದೂ ಕಂಡಿರದ ಅತ್ಯಂತ ಸುಂದರ ಹಾಗೂ ಅದ್ಭುತ, ರೋಮ್, ಪ್ಯಾರೀಸ್, ಲಂಡನ್ ಮತ್ತು ಕಾನ್ ಗಿಂತ ಉತ್ತಮವಾಗಿದೆ ಎಂದು ಅವರು ವರದಿ ಮಾಡಿದ್ದರು.


Click it and Unblock the Notifications